Monday 18 May 2020

ಹೀಗೊಂದು ಕನಸು...


ನನಗು ಒಬ್ಬ ಅಣ್ಣನಿರಬೇಕಿತ್ತು.... 
 ಸದಾ ನನ್ನನು ಕಾಡಿಸಲು .. 
ನನ್ನನ್ನು ನಗಿಸಲು .... 

ನನ್ನ ನೋವಿನಲಿ ಹೆಗಲು ಕೊಟ್ಟು ಜೊತೆಗಿರಲು 
ತವರು ತೊರೆಯುವ ಸಂದರ್ಭದಲ್ಲಿ ಹೋಗಿ ಬಾ ಎಂದು ಹೇಳಲು.. 
ಹಬ್ಬ ಹರಿದಿನಗಳಲ್ಲಿ ಮತ್ತೆ ತವರಿಗೆ ಬಾ ಎಂದು ಕರೆಯಲು.. 
ನನಗು ಒಬ್ಬ ಅಣ್ಣನಿರಬೇಕಿತ್ತು... 

ಇರಬೇಕಿತ್ತು ಆ ಮುದ್ದು ಜೀವ... ನಾವೂ ಅವನನ್ನು ಹುಚ್ಚಿಯಂತೆ 
ಹಚ್ಚಿಕೊಳ್ಳಲು ..... 
ಅವನಿಗಾಗಿ ದೇವರಲ್ಲಿ ಸದಾ ಪ್ರಾರ್ಥಿಸಲು.. 
ನನ್ನ ಅಣ್ಣನಿದ್ದಾನೆ ಎಂದು ಹೆಮ್ಮೆಪಡಲು.... 
ನನ್ನ ತವರೆ ಅವನು ಎಂದು ಹಮ್ಮು ಬಿಮ್ಮುಪಡಲು 
ನನಗು ಒಬ್ಬ ಅಣ್ಣನಿರಬೇಕಿತ್ತು.... 

ಪ್ರೀತಿಯಿಂದ ಅಮ್ಮು  

  

Friday 10 June 2016

..........???????? ತೋಚಿದ್ದು.... ಹಾಗೆ ಗೀಚಿದ್ದು



ತೋಚಿದ್ದು.... ಹಾಗೆ ಗೀಚಿದ್ದು  
     ಸುಮ್ನೆ ಕೆಲಸವಿಲ್ಲದಾಗ ಗೀಚಿದ್ದು..... 
( ಸ್ಫೂರ್ತಿ "ಮುಂಗಾರು ಮಳೆ " ಹಾಡು ಮತ್ತು ಮಳೆಯ ವಾತಾವರಣ )   


ಏಲ್ಲೋ ತೇಲೋ ಮೋಡಗಳು... 
ಏಲ್ಲೋ ಸುರಿಯುವುದು.... 

ಏಲ್ಲೋ ಹುಟ್ಟೋ ಕನಸುಗಳು... 
ಏಲ್ಲೋ ಕರಗುವುದು... 

ಏಲ್ಲೋ ಅರಳೊ ಹೂ ಗಳು... 
ಇನ್ನೆಲ್ಲೋ... ಕಮರುವುದು.... 

ಏಲ್ಲೋ ಚಿಗುರಿದ ಪ್ರೀತಿ.... 
ಮತ್ತೆಲ್ಲೋ ಸಾಯುವುದು.... 

ಭಾವ ಜೀವಿ 
ಅಮ್ಮು 

Wednesday 19 December 2012

ಕನಸು..


ಕನಸು..
ಇಷ್ಟ ಬಂದಾಗೆ..ಬದುಕೋದಕೆ...ನೆಮ್ಮದಿಯಾ....ನಿಟ್ಟುಸಿರು... ಬಿಡೋಕೆ..
ಮನಸಲ್ಲಿನಾ...ಸಾವಿರ ಅಸೆಗಳನ್ನ ಕಾಣೊಕೆ...ಇರುವೆ...ಏಕೈಕ ವೇದಿಕೆ...

ಕನಸು.... ಬದುಕಿನಲ್ಲಿ ನಾವು ಕಾಣುವಾ...ಕಲ್ಪನೆಯಾ ಕಥೆ..
ಕಲ್ಪನಿಕ ಅದರು...ನಿಜ ಜೀವನಕ್ಕೆ...ಸಂಬಂಧಿಸಿರುತ್ತದೆ...
ಮನುಷ್ಯನಿಗೆ..ಕನಸು ಕೆಲವು ಸಾರಿ...ಆನಂದವನ್ನು ಉಂಟುಮಾಡಿದರೆ... ಮತ್ತೆ ಕೆಲವು ಸಾರಿ ಕಹಿ ಅನುಭವಗಳನ್ನು ಕೊಡುತ್ತದೆ..

ಕನಸು...ನಾವು ಸಾದ ಯಾವುದಾದರು ವಿಷಯದ್ ಬಗ್ಗೆ ಯೋಚನೆ ಮಾಡುತಿದ್ದರೆ ಅಥಾವ ನಮ್ಮ
ಮುಂದಿನ ಹಾಗು ಹೋಗಗಳ....ಕೊಂಚ ಲಕ್ಷಣಗಳನ್ನ ಸಹ ಕೊಡುತ್ತದೆ... ಈ ಎರಡು ರೀತಿಯ ಬಗೆಯಲ್ಲಿ..ನಮಗೆ ಕಾಣಿಸಿಕೊಳ್ಳುತ್ತದೆ..

ಒಳ್ಳೆಯದು ಮತ್ತು ಕೆಟ್ಟದು...ಎಂಬ ಎರಡು ರೀತಿಯಾ ಕನಸುಗಳು..... ಮನವನ ಮನಸಿನ ಮೇಲೆ ಪರಿಣಾಮ ಬಿರೋದಂತು.... ನಿಜ ಅಲ್ವ,...
ಬದುಕಲ್ಲಿ ಕನಸಿರ ಬೇಕು, ಅದ್ರೆ ಕನಸೆ ಬದುಕಗಬಾರದು....


ಕನಸು ಕಾಣದೆ ಇರುವ..ಮನುಷ್ಯನೆ... ಇಲ್ಲ.... ಹಾಗೆ ಕೆಲವರು ಕಂಡ ಕನಸನ್ನ...ನನಸಾಗಿ ಮಾಡ್ಕೊತಾರೆ....
ಇನ್ನು ಕೆಲವರು..ಕನಸನ್ನೆ ಕಾಣ್ತ ಜೀವನನಾ ಸಾಗಿಸುತ್ತರೆ..

ನಿಜವಾಗದ ಏಷ್ಟೊ ಸಂಗತಿಗಳು.... ಕನಸಿನಲ್ಲಿ ಕಾಣುವುದೆ... ಒಂದು ಸುಂದರ...
ಯಾರ ತಾಪತ್ರಾಯನು ಇಲ್ಲದೆ...ಮನಸೊ ಇಚ್ಚೆ... ಇರಬಹುದು....
ಎಷ್ಟೆ..ಕನಸು ಕಂಡರು ಒಂದಲ್ಲ ಒಂದು ದಿನ... ವಾಸ್ತವಕ್ಕೆ ಬರಲೆ..ಬೇಕು..
ಕಂಡ ಕನಸುಗಳೆಲ್ಲ...ನನಸಾಗಿ ಬಿಟ್ಟರೆ.... ಕನಸಿಗೆ..ಬೆಲೆನೆ ಇರುತ್ತಿರಲಿಲ್ಲ... ಅನ್ನೊ ಮಾತು ನೆನಪಿಟ್ಟುಕೊಳ್ಳಬೇಕು...

ಕನಸು ಕಾಣೊ ಕನಸುಗಾರ.... ಕೂಡ ಎಷ್ಟೊ ಕನಸನ್ನ...ಕನಸಾಗೆ... ಇಟ್ಟಿರ್ತಾನೆ....
ತುಂಬಾ ನೋಂದಿರೊ ಮನಸಿಗೆ... ಕನಸು... ನೆಮ್ಮದಿಯಾ...ಕ್ಷಣಗಳನ್ನು... ಕೊಡುತ್ತೆ...
ನಮ್ಮ ಮನಸಿನ..ಅಗು ಹೋಗುಗಳು... ಮತ್ತು ಅದರ ಸಮದಾನಕ್ಕೆ ಮಾತ್ರ ಈ ಕನಸು...
ನಾವು ಮನಸಲ್ಲಿ ಅಂದುಕೋಳ್ಳೊದು ಕನಸಿನ ರೂಪದಲ್ಲಿ ಬರುತ್ತಂತೆ...
ಮನಸು ಬಯಸೊ ಕನಸು....ಖುಷಿಯನ್ನ ತರುತ್ತದೆ...
ಅಂದ್ರೆ ಕನಸು..ಕಲ್ಪನೆ ಅಂತ ಅಯ್ತು,....


ನಮ್ಮನ್ನ ಸೃಷ್ಟಿಸಿದ ದೇವರು.... ಕನಸನ್ನು ಕೂಡ ನಮಗೆ ಬಳುವಳಿಯಾಗಿ ಕೊಟ್ಟಿದ್ದನೆ...
ಎಂಥಾ ವಿಚಿತ್ರ ಅಲ್ವ, ವಿಚಿತ್ರ ಅದ್ರು ಅವನ..ಕಲ್ಪನೆಗೆ.... ನನ್ನದೊಂದು ಸಲಾಂ...

ನಾನು ತುಂಬಾ ಕನಸು ಕಾಣ್ತಿನಿ... ಅದ್ರೆ.. ಜಾಸ್ತಿ ನನಸು ಅಗೋಲ...
ಅದ್ರು ಕನಸನ್ನೆ ಜಾಸ್ತಿ ಅಪ್ಪಿಕೊಳ್ತಿನಿ, ಅಲ್ಲದ್ರು ನಾನು ನಗ್ತಾ ನಗ್ತಾ ಇರಬಹುದು ಅನ್ನೋ...ಹುಚ್ಚು ಅಸೆ ಇಂದ...
ನಾನಂತು ಕನಸು ಕಾಣೋದ್ನ..ಬಿಡೋಲ....
ನೀವು ಬಿಡಬೇಡಿ.....
ಕನಸೆ ಇಲ್ಲದ ಲೋಕ ನಮಗೆಕಮ್ಮ........ ಬೆಳಕೆ ಇಲ್ಲದ..ದಾರಿಯಲಿ...
ನಾನು ನಡೆಯಬಲ್ಲೆ.... ಕನಸೆ ಇಲ್ಲದ...ದಾರಿಯಲಿ...ನಾ ಹೇಗೆ ನಡೆಯಲಿ...

ನಮ್ಮ ಕನಸುಗಾರ ರವಿ ಸರ್..... ಹೇಳಿರೊದು ಸತ್ಯ ಅಲ್ವ,
ಏನೆ ಅದ್ರು ಕನಸನ್ನ ಕಾಣುತ್ತ ಇರಿ...... ಕಂಡ ನಿಮ್ಮ ಕನಸುಗಳು... ನನಸಾಗಲಿ...
ಅಗ್ಲಿಲ್ವ, ನಿರಾಶೆಯಂತು ಅಗಬೇಡಿ... ಮತ್ತೆ ಕನಸು ಕಾಣಿ....
ಕನಸು ಕಾಣೊಕೆ..ಯಾರ ಅಪ್ಪಣೆಯು ಬೇಕಿಲ್ಲ......

ನನ್ನ ಮನಸೆಂಬ.....ಪುಸ್ತಕದಲ್ಲಿ..... ನಾ ಕಂಡ ಸಾವಿರಾರು.... ಕನಸುಗಳ..ಪುಟವಿದೆ...
ನನಸಾಗದೆ ಉಳಿದ ಏಷ್ಟೊ... ಕನಸುಗಳು.... ನನಸಾಗಲಿ...
ಅಂತ ಹಾರೈಸಿ.... ಗೆಳೆಯರೆ....
ಹಾಗೆ ನಿಮ್ಮ ಎಲ್ಲ ಕನಸುಗಳು.... ನನಸಾಗಲಿ ಅಂತ ಆ ದೇವರಲ್ಲಿ....
ನಾ ಪ್ರಾರ್ಥಿಸುತ್ತೆನೆ...

ಭಾವ ಜೀವಿ
ಅಮ್ಮು..



Tuesday 18 December 2012


ಗೆಳೆಯ ನಾನಿಂದು ನಿಂತಿರುವೆ...
ಬೆಳದಿಂಗಳ ರಾತ್ರಿಯಲ್ಲಿ..ಒಬ್ಬೊಂಟಿಯಾಗಿ...
ಮೆಲ್ಲ ನೋಡುತಿರುವೆ  ಅಂಬರದ ಚಂದಿರನನ್ನ..
ಏಕೋ ಕಾಣೆ..ಗೆಳೆಯ...ನಿನ್ನ ಒಲವ ನೆನಪು...
ಬೇಡವೆಂದರೂ..ಬಿಟ್ಟು ಬಿಡದೆ..ಕಾಡುತಿತ್ತು..
ನೀ ಮಾಡಿದ...ರೀತಿಯಾ..ಕಂಡ ಕಂಗಳಿಂದ...
ಹನಿಯೊಂದು ಜಾರಿತ್ತು...
ಬಿದ್ದ ಹನಿಯು...ಹೇಳಿತು....ನೋವಿನ ಕತೆಯಾ..
ಅದರು ಮನ ಬಯಸಿತು...ನೀ ಬಾರದ ದಾರಿಯಾ..
ಮನದ ಆಗಸದಲ್ಲಿ..ಎಂದು ಮರೆಯಾಗದ ಚಂದಿರ ನೀನು...
ದೂರದಿಂದಲೆ..ನಿನ್ನ ನೋಡಿ.... ಅನಂದಿಸುವ.. ಭೂಮಿ ನಾನು..

ಭಾವ ಜೀವಿ 
ಅಮ್ಮು 



ದಿನವಿಡಿ... ನಿನ್ನ ನೆನಪಲ್ಲೆ..ನೊಂದಿಹೆನು....
ಮಾತಿದ್ದರು...ಆಡದೆ.. ಮೌನಿಯಾದೆನು..

ಮನದಲ್ಲಿಗ ಕರಾಳ...ಮೌನ...ನೀನಿಲ್ಲದೆ..
ಅರಿವಿಲ್ಲದೆ ಕಣ್ಣ ಹನಿಯೊಂದು...ತಾಕಿರುವುದು ಕೆನ್ನೆಯ...
ಬಿದ್ದ ಬಿಂದುವನ್ನು.... ಹೊರೆಸಲು.. ಬರುವೆಯಾ..ಗೆಳೆಯಾ..
ಕಂಗಳಲ್ಲಿ..ನಾ ನಿನಗಾಗಿ ಬಚ್ಚಿಟ್ಟ..ಒಲವು ನಿನಗೇಕೆ..ಕಾಣಾಲಿಲ್ಲ...
ನನ್ನ ಮನದಲ್ಲಿಗ...ನಿನ್ನ ನೆನಪುಗಳು..ಹೊರೆತು..ಬೇರೆನಿಲ್ಲ....
ನೆನಪಿನ ಅಂಗಳದಲ್ಲಿ... ನನ್ನ ಹೋರೆತು..ಬೇರಾರಿಲ್ಲ...
ಸುಖವಿದೆ ನಿನ್ನ ನೆನಪಿನಲಿ...
ಹರಸುವೆ...ತುಂಬು ಮನದಿಂದ...
ಜಗತ್ತಿನ...ಸುಖಗಳೆಲ್ಲ..ನಿನ್ನದಾಗಲಿ..



ಭಾವ ಜೀವಿ 
ಅಮ್ಮು 

Monday 17 December 2012

ಹೇಳೀಬಿಡು ಗೆಳೆಯ....


ಮೊದಲ ನೊಟ, ಮೊದಲ ಮಾತು
ಮೊದಲ ನಗುವು, ಮೊದಲ ಜಗಳ....
ಈ ಎಲ್ಲ ಮೊದಲ ಪ್ರ‍ೇಮದ ಮಧುರ ಕ್ಷಣಗಳ..
ಹೇಗೆ ಮರೆಯಲಿ ನಾನು
ಹೇಳೀಬಿಡು ಗೆಳೆಯ.... ನಿಜವಾಗಿಯು
ನೀ ನನಗೆ ಕೊಟ್ಟಿದ್ದು....
ಪ್ರೀತಿಯೆಂಬ ಕನಸ...
ಅಥವಾ ದುಖಃವೆಂಬ ನನಸ....

ಪಾಳುಬಿದ್ದ.... ಹೃದಯದಲ್ಲಿ....
ನಿನ್ನ ದನಿಯೆ...ಪ್ರತಿದ್ವನಿಯಾಗಿ...ಕೇಳುತಿದ್ದೆ...
ಅಲಿಸಲು...ನೀನಿಲ್ಲ....
ನಾ ಕೂಗಿ ಹೇಳಿದರು...ನಿನಗದು ಕೇಳೊಲ್ಲ...
ಹೇಳಿಬಿಡು ಗೆಳೆಯ....ನಿಜವಾಗಿಯು..
ನೀ ನನಗೆ... ಸಿಕ್ಕಿದ್ದು...
ವರನಾ? ಇಲ್ಲ ಶಾಪನಾ?

ಮುರಿದು ಬಿದ್ದ ಕನಸುಗಳ.... ಮರು ಜೋಡಿಸುವ..
ಹುಚ್ಚು...ಮನಸು ನನ್ನದು....
ಎಕೆಂದರೆ ಕನಸಿನ್ನಲ್ಲಾದರು ನೀ ನನ್ನೋಡನೆ ಇರುವೆ ಎಂದು...
ಹೇಳಿಬಿಡು ಗೆಳೆಯ... ನಿಜವಾಗಿಯು....
ನೀನು ನನ್ನ ಬದುಕಲ್ಲಿ....
ಮಾಯೆಯೊ...ಇಲ್ಲ ಮರಿಚಿಕೆಯೊ..

ನಿನ್ನಿದ್ದ ನೆನ್ನೆಗಳಲ್ಲಿ.....ನನಗೆ ಪ್ರೀತಿ ಕೊಟ್ಟೆ ನೀನು...
ನೀ ತೋರೆದ ಈ ಘಳಿಗೆಯಲ್ಲಿ... ನೋವ ತುಂಬಿ ಹೋದೆ ನೀನು..
ನೀನಿರಾದ ನಾಳೆಗಳಲ್ಲಿ...ನಿನ್ನ ನೆನಪ..ಬಿಟ್ಟಿ ಹೋದೆ
ಕೊನೆಬಾರಿ... ಹೇಳಿಬಿಡು..ಗೆಳೆಯ...ನಿಜವಾಗಿಯು
ನೀ ನನ್ನ ಬದುಕಿಗೆ....
ಪ್ರೀತಿ ಕೂಡಲು ಬಂದೆಯೊ....ಇಲ್ಲ..
ಮೋಸ ಮಾಡಲು ಬಂದೆಯೊ....

ಭಾವಜೀವಿ..
ಅಮ್ಮು   


Thursday 22 November 2012

ನಿನ್ನ ಎದೆಯ ಗೆಜ್ಜೆ ಸದ್ದು ನಾನ್ ಅಲ್ಲ ಅಲ್ವ.....



"ನಾನೆ ನಿನ್ನ ನಾನೆ ನಿನ್ನ ತುಂಬಾ ತುಂಬಾ ಪ್ರೀತಿ ಮಾಡೋದು......."
ಹುಡುಗಿಯೊಬ್ಬಳ ಮೊಬೈಲ್ ನಲ್ಲಿ.... ಬರುತಿದ್ದ ಹಾಡು ಕೇಳುತ.. ತನ್ನೆಲ್ಲ ನೆನಪನ್ನು ನೆನೆಯುತ ಅವಳು 
ಏಕಾಂತದ ಮೌನದಲ್ಲಿ......ಮುಗಿಲಲ್ಲಿರುವ ಚಂದ್ರಮತ್ತು ನಕ್ಷತ್ರ‍ನೋಡುತ್ತ...ಕಣ್ತುಂಬಿಕೊಳ್ಳುತ್ತಳೆ..ಕೇಳದೆ ಮೆಲ್ಲಗೆ ಕಣ್ಣೀಂದ ಜಾರುವ ಹನಿಯ ತಡೆಯದೆ... ಮನದ ನೊವನೆಲ್ಲ..
ತನ್ನ ನಗುವಿನಲ್ಲಿ..ಮರೆಮಾಚುತ್ತ... ಅವನ ಅಗಮನದ ದಾರಿಯ ನೋಡುತ್ತ ನಿಂತಿರುತ್ತಳೆ ಹತಷೆಯ ಮುಗುಳ್ನಗು ಬೀರುತ್ತ.... ಸರಿ ಸುಮಾರು ಏಳು ವರ್ಷಗಳ ಬಳಿಕ.

ಅದು ಏನನ್ನೊ ಹುಡುಕುತಿದ್ದ ಕಂಗಳಿಗೆಥಟ್ಟನೆ..ನೆನಪಗಿದ್ದು... ಕಣ್ಣೆದುರಿಗೆ ಇದ್ದವನು... ಕಣ್ಣೆದುರೆ ದೂರಾಗಿ ಹೋದ ಪರಿಯನ್ನು ನೆನೆಸಿಕೊಳ್ಳುತ್ತಅವನು ಮತ್ತೆ ಸಿಗುವನನನ್ನಷ್ಟು ಅವನನ್ನು ಯಾರು ಪ್ರೀತಿಸಲಾರರು?ಅವ್ನು ನನ್ನ ಮತ್ತು ನನ್ನ ಪ್ರೀತಿನಾ ಮರೆತೆಬಿಡುವನ?ಎಂಬ ನೊರೆಂಟು ಹುಚ್ಚು ಪ್ರೇಶ್ನೆಗಳಿಗೆ ಉತ್ತರ ಮಾತ್ರ ಗುಪ್ತಗಾಮಿನಿಯಾಗಿದೆ.
ಮನದಲೆಲ್ಲೊ ನನ್ನ ಪ್ರೆಶ್ನೆಗಳಿಗೆ ಉತ್ತರ ಸಿಗದೆ ಹಾಗೆ ಪ್ರೆಶ್ನೆಗಳಾಗೆ ಇರಲಿ ಎನ್ನುವ.. ಅಸೆಯು ಅವಳದ್ದು.

ನಿನ್ನ ಪ್ರೀತಿಯ ನೆನಪು ಮತ್ತೆ ನೀನು ನನ್ನ ಬಳಿ ಬರುವೆಯೆಂಬ ಕನಸುಗಳ ನಡುವೆ...
ನನ್ನ ಪಯಣ....
ನೆನಪಿದ್ಯೊ ಇಲ್ಲ ಮರೆತಿದ್ಯೊಮರೆತಿದ್ರೆ ಒಳ್ಳೆದು ಯಾಕೆ ಅಂದ್ರೆ ನನ್ನ ನೆನಪು ನಿನಗೆ ಬೇಡ.. ಅದ್ರೆ ನಿನ್ನ ನೆನಪು ನನ್ನ ಪ್ರೀತಿಗೆ ಉಸಿರು... ನನ್ನ ಪ್ರೀತಿನ ಸಾಯ್ಸೊಕೆ ನಂಗೆ ಇಷ್ಟ ಇಲ್ಲ ಕಣೋ
ಏಳು ವರ್ಷದ ಹಿಂದೆ ನಿನ್ನ ನನ್ನ ಪ್ರೀತಿ ಜೀವಂತವಾಗಿತ್ತು,
ಹಳೆ ದೇವಸ್ಥಾನದ ಬಳಿ.... ನೀನು ನನಗೆ ಪ್ರೀತಿ ಹೇಳಿದ್ದನ್ನುನಾನು ನೀನು ಬೆಳದಿಂಗಳ ರಾತ್ರಿಯಲ್ಲಿ ನಮ್ಮ ಮುಂದಿನ ಜೀವನದ ಕನಸ ಕಂಡಿದ್ದು......
ಹೊಸದಾಗಿ ನೀ ನನಗೆ ಪರಿ ಎಂದು ಹೆಸರಿಟ್ಟಿದ್ದು,ನಿನ್ನ ಪರಿಯನ್ನು ಚಂದಿರನಿಗೆ ಹೋಲಿಸಿದ್ದು....... ನೀನ್ನ ಆ ನಗುಗೆ ನನ್ನ ಮನಸೊತ್ತಿದ್ದು.... ಎಲ್ಲ ನಂಗೆ ಮತ್ತೆ ಬೇಕು ಅನ್ನಿಸುತ್ತಿದೆ... ಮತ್ತೆ ಕೊಡ್ತಿಯಾ...
ಇಲ್ಲ ನಿನ್ ಕೊಡೊಲ್ಲ ಅಲ್ವ....
ಪರಿ ನೀನೆ ನಂಗೆ ಎಲ್ಲ ಕಣೆ.. ನಿನ್ನ ಪ್ರೀತಿ ನಿನ್ನ ಕೋಪನಿನ್ನ ನಗು ನಿನ್ನ ಅಳು... ಎಲ್ಲ ನಂಗೆ ಬೇಕು ಅಂತ ಅಂದು ಹೇಳಿ ಹಣೆಗೆ ಮುತ್ತಿಟ್ಟ ಹುಡುಗ ನೀನು.....
ಪ್ರೀತಿನೆ ಗೊತ್ತಿಲ್ಲದ ನಂಗೆಪ್ರೀತಿಸೋದು ಒಂದು ಕಲೆ ಅಂತ ಹೇಳಿ... ಯಾರು ಪ್ರೀತಿಸಲಾರದಷ್ಟು...ನನ್ನ ಪ್ರೀತಿಸಿದೋನು ನೀನು....
ಪರಿಆ ನಕ್ಷತ್ರನ ಎಷ್ಟು ಎಣಿಸೋಕೆ ಅಗೊಲ್ವೊ ಅಷ್ಟು ನಾನು ನಿನ್ನ ಪ್ರೀತಿ ಮಾಡ್ತಿನಿ ಕಣೆ..ಅಂದೆ.. ಏಷ್ಟೊ ಬೆಳದಿಂಗಳು... ಹೊಯ್ತು... ಅದ್ರೆ ಅಷ್ಟು ಬೆಳದಿಂಗಳಲ್ಲಿ... ನಿನ್ನ ನೆನಪೆ ನಕ್ಷತ್ರದ ಹಾಗೆ ಪ್ರಜ್ವಲಿಸುತಿತ್ತು....

ಕತ್ತಲೆ ಕವಿದಷ್ಟು ನಕ್ಷತ್ರ ಹೋಳೆಯುತ್ತಂತೆ....
ಹಾಗೆ ನಿನ್ನ ನೆನಪು ನನ್ನ ಮನದಲ್ಲಿ ಅದಷ್ಟು...ಪ್ರೀತಿ ಜಾಸ್ತಿ ಅಗುತ್ತೊ ಹೋರತು ಕಡಿಮೆ ಅಗೋಲ್ವೊ..ಮುದ್ದು..
ಮುದ್ದು ಅಂತ ಯಾರದ್ರು ಈ ತರ ಅಂದ್ರೆ ಒಂದು ಕ್ಷಣ ನಾನು ನಗ್ತಿನಿ ಗೊತ್ತ... ಯಾಕೆ ಅಂದ್ರೆ ನಾನು ನಿನ್ನ ಪ್ರೀತಿಯಿಂದ ಕರಿತಿದ್ದೆ... ಮತ್ತೆ ಕರೀತಿನಿ ಒಂದ ಸಲ ಬಾರೋ...
ಮನಸು ನಿನ್ನ ಕೂಗಿ ಕೂಗಿ ಕರಿತಿದೆ... ಅದ್ರೆ ಆ ಕರೆನ ಕೇಳೋ ನಿನ್ನ ಕಿವಿ ನನ್ನ ಪ್ರೀತಿ ವಿಷಯದಲ್ಲಿ ಕಿವುಡಾಗಿದೆ ಅಲ್ವ..
ನಿನ್ ಹೃದಯದ ಬಡಿತವನ್ನ.... ನಾ ಹಾಕೋ ಗೆಜ್ಜೆಗೆ ಹೋಲಿಸಿ... ಅದರಿಂದ ಬರೋ ಸದ್ದಿಗೆ ನನ್ನ ಹೋಲಿಸಿದ್ದೆ..
ಪರಿನನ್ನ ಎದೆಯ ಗೆಜ್ಜೆಸದ್ದು ನೀನೆ ಕಣೆಅಂತ... ನಾನು ಗೆಜ್ಜೆ ನೋಡಿದಾಗಲೆಲ್ಲ ನೀನ್ ಮಾತೆ ನೆನಪಾಗುತ್ತೆ ಕಣೋ....
ನನ್ನ ಇಷ್ಟೊಂದು ಪ್ರೀತಿಸಿದ್ದ ನಿನು... ಈಗ ಏನಾಯಿತು ನಿನ್ ಪ್ರೀತಿಗೆ ಹೇಳು... ಮುದ್ದು...

ಯಾವ್ ಕೆಟ್ಟ ಕಣ್ಣು ಬಿತ್ತು ನನ್ನ ನಿನ್ನ ಪ್ರೀತಿಮೇಲೆ... ಹೇಳು.....

ನಾವಿಬ್ರು ಕೈ ಹಿಡಿದು ನಾಡೆದಾಡಿದ್ದ ಆ ದಾರಿಯಲ್ಲಿ...ಈಗ ನೀರವ ಮೌನ ತುಂಬಿ ಕೊಂಡಿದೆ... ಮತ್ತೆ ಕೈ ಹಿಡಿದು ನಡೆಯೊಣ ಅಂದ್ರೆ.... ನಿನು ಬೇರೋಬ್ಬರ ಕೈ ಹಿಡಿತಿದ್ಯ..ಅಲ್ವ.

ಚೆನ್ನಗಿರು.... ನಂಗೆ ಅಷ್ಟೆ ಬೇಕಾಗಿದ್ದು.... ಮುದ್ದು...
ಕಾರಣವಿಲ್ಲದೆ ದೂರಾದೆ ನೀನು..... ನಿನ್ನ ಹೃದಯದಲ್ಲಿ ನನಗೆ ಜಾಗ ಇಲ್ಲ ಅಂತ ಗೊತ್ತೈತು...

ಹುಡುಗಿ ತನ್ನ ಪ್ರೀತಿಯನೆಲ್ಲ ತನ್ನ ಮನಸಿನಲ್ಲೆ ನೆನೆಸಿಕೊಳ್ಳುತ್ತನಿಂತಿರುವಾಗ....
ಅವಳ ಮೊಬೈಲ್ ಗೆ ಒಂದು ಕರೆ ಬರುತ್ತದೆ...
ಅವಳು ಪ್ರೀತಿಸಿದ ಹುಡುಗನ ಕರೆ ಅದಾಗಿರುತ್ತದೆ.
ಸ್ವೀಕರಿಸಿ ಮಾತನಾಡದೆ... ನಿಲ್ಲುತ್ತಳೆ..
"ಭೂಮಿಸಾರಿ ಕಣೇ.... ಏಳು ವರ್ಷ ಅದ್ಮೇಲೆ ಮತ್ತೆ ನಿನ್ನ ಪ್ರೀತಿನ ಕೊಡೋಕೆ ಬಂದೆಅದೆ ಪ್ರೀತಿ ಇಂದ.... ಅದ್ರೆ ಅದ್ನ ಸ್ವೀಕರಿಸೋ ಯೋಗ್ಯತೆ ಅಗಲಿನಂಗೆ ಇಲ್ಲ...
ನಿನ್ನ ಪ್ರೀತಿನಾ  ಅನುಮಾನಿಸ್ದೆ... ಕ್ಷಣಕ್ಕೆ.. ನಿನ್ನ ಮೇಲೆ ಕೋಪವಿತ್ತು..ಅದ್ರೆ ಆ ಕೊಪದ ಇಂದ ನೀನು ನನಗೆ ಬೇಕು ಅನ್ನೋದು ನನ್ನಲ್ಲಿ ಇತ್ತು....
ಅದ್ರೆ,, ಆ ವಿಧಿ ಮುಂದೆ ನಾವ್ಯಾರು ಅಲ್ವ.... ನಾನ್ ನಿನ್ನ ತುಂಬಾ ಪ್ರೀತಿ ಮಾಡ್ತಿದ್ದೆ... ಅದೆ ಇರಬೇಕು ನನ್ನಿಂದ ನಿನ್ನ ದೂರ ಮಾಡಿದ್ದು...
ತುಂಬ ಬೇಜಾರ್ ಅಗ್ತಿದೆ ಕಣೆ...
ಅದ್ರೆ ಭೂಮಿ ಟೈಮ್ ನೋಡು ಹೇಗಿದೆ ಅಂತ.... ಇನ್ನೋಂದು ತಿಂಗಳಲ್ಲಿ ನನ್ನ ಮದ್ವೆ...
ನಿಂಗು ಗೊತ್ತು.... ಪ್ರೀತಿನ ಕಳ್ಕೊಂಡೆ ಅನ್ನೊ ಟೈಮ್ ಗೆ ನೀನು ಮತ್ತೆ ಬಂದೆ ಅದ್ರೆ...? ನಂಗೆ ಅಂತ ಇನ್ನೊಂದು ಪ್ರೀತಿ ಕಾಯ್ತೈದೆ...
ಈ ನನ್ನ ಸೋತ ಹೃದಯದಿಂದ ಹೇಳ್ತಿದಿನಿ ಕಣೆ.....
"... ಮಿಸ್ ಯು..... "

ಪ್ಲೀಸ್ ಅಳಬೇಡ ಕಣೆ... ಇನ್ನೊಂದು ಸತ್ಯ ಗೊತ್ತ.... ನಿನ್ನಷ್ಟು ನನ್ನ ಯಾರು ಪ್ರೀತ್ಸೊಲ್ಲ ಅನ್ನೊದು...
ಮಾತಡು ಭೂಮಿ...
"ಚಂದ್ರು... ಕೊನೆದಾಗಿ ಒಂದ್ ಕೇಳ?..
ಕೇಳೆ... ಎನದು?
(ಅಳುತ್ತ ಭೂಮಿ ಕೇಳುತ್ತಳೆ)
ನಿನ್ನ ಎದೆಯ ಗೆಜ್ಜೆ ಸದ್ದು ನಾನ್ ಅಲ್ಲ ಅಲ್ವ.....
(ಅವಳ ಪ್ರೆಶ್ನೆಗೆ.. ಉತ್ತರ ಕೊಡಲಾಗದ ಚಂದ್ರು...)
ಭೂಮಿ...... "... ಮಿಸ್ ಯು..... " ಅನ್ನುತ್ತನೆ..
ಚಂದ್ರು ಸತ್ಯ ಗೊತ್ತ....
ಅಕಾಷದಲ್ಲಿ ಇರೋ ಚಂದಿರನ್ನ.... ನೋಡಿ ಸಂತಸ ಪಡಬೇಕೆ ಹೊರೆತು....ಮುಟ್ಟೊಕೆ ಅಸೆ ಪಡಬಾರದು...
ಯಾಕೆಂದರೆ... ಅವ್ನು ಯಾರ್ ಕೈಗು ಸಿಗೋಲ...ಅಲ್ವ...
ಅಂತ ಅಳುತ್ತ.. ಫೋನ್ ನನ್ನು...ಕಟ್ ಮಾಡುತ್ತಳೆ....

ಭೂಮಿ ಮತ್ತು ಚಂದಿರನ ಪ್ರೀತಿ...ಹೇಳಲಾಗದು....
ಅದ್ರೆ ಅವರಿಬ್ಬರು ಮಾತ್ರ... ಒಂದಗಲಾರರು..
ದೂರದಿಂದಲೆ..ಚಂದಿರನ ನೋಡಿ ಖುಷಿ ಪಡುವ..ಭೂಮಿಯ ಪ್ರೀತಿ.. ವರ್ಣತೀತ..

ಭಾವಜೀವಿ
ಅಮ್ಮು