Wednesday 17 October 2012

ಭಾವ ಜೀವಿ ನಾನು..



ಭಾವ ಜೀವಿ ನಾನು..
ನನ್ನ ಭಾವನಾ.ಲೋಕಕ್ಕೆ ಬಂದವನು ನೀನು..
ಬಂದವನು..ನಿರ್ಮಲವಾಗಿದ್ದ..ಮನಸಿಗೆ..
ಬಿರುಗಾಳಿ..ಎಬ್ಬಿಸಿದವನು ನೀನು..
ಮುಚ್ಚಿಟ್ಟ ಹೃದಯದ ಬಾಗಿಲನ್ನು..
ತಟ್ಟಿ..ನನ್ನೇ ನಾ..ಮರೆಯುವಷ್ಟು. ಪ್ರೀತಿಸಿದವನು..ನೀನು..
ಮಾತು ಮಾತಿಗೂ ನನ್ನವಳೇ ಎಂದವನು ನೀನು..
ನನ್ನ ಬಿಟ್ಟು ಏಕೆ ಮರೆಯದೆ ನೀನು..??
ಕಣ್ಣಿನಂತೆ ಎಂದವನು ನೀನು..
ಕಣ್ಣ ಮರೆತು ಹೋದನು
ಈ ಕಣ್ಣಿನಲಿ ಹನಿಯಾದನು
ಹನಿಯಲ್ಲಿ ನಾ ಮಿಂದಿರುವೇನು..

ಭಾವಜೀವಿ 
*ಅಮ್ಮು*


ನೆನಪುಗಳೇ ಸಾಕೆನಗೆ..



ನನ್ನ ಮನದಲ್ಲಿ ಅರಳಿದ...ಹೂವಿಗೆ...
ಪ್ರೀತಿಯೆಂಬ ನೀರೆರೆದೆ... ನೀನು...
ಅದು ಅರಳಿ..ನಿಂತಾಗ... ದೂರಾಗಿ... ಎಕೆ ಹೋದೆ..??

ಬಾಳಾ ದಾರಿಯಲಿ.... ನನ್ನ ಜೊತೆ ನಡೆದು...
ನೊರೆಂಟು ಅಸೆಗಳ..ನನ್ನಲ್ಲಿ ತುಂಬಿ...
ಅದು ನನಸಗುವಾ ಘಳಿಗೆ..ಬಂದಾಗ...
ಪ್ರೀತಿ ದಾರಿಯ..ಬಿಟ್ಟು ಮರೆಯಾದೆ ನೀನು..

ಕಣ್ಣು ನೀನು..ರೆಪ್ಪೆಯು ನಾನು ಎಂದವನು ನೀನು..
ಕಣ್ಣಲ್ಲಿ ನೀರುರಿಸಿ..ಬಹು ಬೇಗ ಕಣ್ಣಿಂದ ದೂರಾಗಿ ಹೋದೆ.
ನಿನ್ನ ಪ್ರೀತಿಗೆ ನಾ ಮನದಲ್ಲೆ ನೊಂದೆ....
ಗೆಳೆಯ ಜೊತೆಗೆ ನೀನಿಲ್ಲ....
ನೀ ಬಿಟ್ಟು ಹೋದ ನೆನಪುಗಳೆ ನನಗೆಲ್ಲ....

ಭಾವಜೀವಿ 
*ಅಮ್ಮು*



ಸ್ನೇಹಕ್ಕೊಂದು ಸಲಾಂ............


ಮೊದಲ ನೊಟ...ಮೆಲ್ಲ ನಗು...ಸಂಕೋಚದಿಂದ ಹೊರಬರುವ ಮಾತು....ನಂತರ ನೀರಾಳ ಮನೋಭಾವ.. ಹೀಗೆ ಪರಿಚಯ ಅಗುವ ವ್ಯಕ್ತಿಗಳೆ..ನಂತರದ ನಮ್ಮ ಮುದ್ದು ಗೆಳೆಯ/ಗೆಳೆತಿಯರು
ನಮ್ಮ ಬದುಕಿನಲ್ಲಿ..ಸ್ನೇಹ ಎಂಬುದು ಮಹತ್ವವಾದ ಪಾತ್ರ ವಹಿಸುತ್ತದೆ.
ಚಿಕ್ಕಂದಿನಿಂದ ನಮಗೆ ನಮ್ಮ ಹೆತ್ತವರು ನೀ ಅವಳ/ಅವನ ಜೊತೆ ಅಟ ಅಡಿಕೊ.. ಎಂದು ಹೇಳಿಕೊಡುತ್ತರೆ... ಏನು ತಿಳಿಯದ ಆ ವಯಸ್ಸಿನಲ್ಲಿ... ಮೊದಲು ಕಲಿಯುವುದು...ಸ್ನೇಹವನ್ನ...
ಸ್ನೇಹ ಒಂದು ಮಧುರ..ಬಾಂದವ್ಯ...
ಏನು ತಿಳಿಯದ ವಯಸ್ಸಿನಲ್ಲಿ...ಗೊತ್ತಿಲ್ಲದೆ ಮೂಡುವ ಸುಂದರ..ಭಾವನೆ....
ಮಾನವ ಒಬ್ಬ ಭಾವ ಜೀವಿ,ಸಂಘ ಜೀವಿ...
ಬಲು ಬೇಗ ಇತರರೊಂದಿಗೆ ಬೆರೆಯುವ...ಮನುಷ್ಯ ಜೀವಿ..  ಬಾಲ್ಯದಲ್ಲೆ...ಮೂಡುವ ಸ್ನೇಹ ಏಂಬ ಪದದ ಅರ್ಥ, ಬೆಲೆ ಗೊತ್ತಗೋದು.. ನಾವು ಪ್ರೌಢರಾದಗ..
ನಿಜ ಸ್ನೇಹಿತರೆ, ಸ್ನೇಹಲೋಕಕ್ಕಿಂತ ಸುಂದರ ಸುಮಧುರ ಇನ್ನೊಂದಿಲ್ಲ...
ಹೆತ್ತವರೆ ಏಲ್ಲ ಎಂದು ಹೇಳುವ ನಾವು...ಏಷ್ಟರ ಮಟ್ಟಿಗೆ..ನಮ್ಮಲ್ಲಿರುವ.. ಮನೋ ಭಾವನೆಗಳ್ಳನ್ನ ಹೇಳ್ಕೊತೀವಿ ಹೇಳಿ?
ಅಗೋಲ್ಲ ಅಲ್ವ, ಫ಼್ರೆಂಡ್ಸ್..... ಆಪ್ಪ ಅಮ್ಮ ಎಷ್ಟೇ. ಮುಖ್ಯವಾದ್ರು... ನಮ್ಮೆಲ್ಲ ಸುಖ,ದುಃಖಗಳ್ಳನ್ನ ಹಂಚ್ಕೊಳ್ಳೊ...ಒಂದೆ ಒಂದು ಜೀವ ಅಂದ್ರೆ ಸ್ನೇಹಿತ/ತೆ.
ಯುಗ ಯುಗಗಳೆ ಸಾಗುತ್ತಿವೆ.... ಅದ್ರೆ ಸ್ನೇಹ ಮಾತ್ರ ಬದಲಾಗಿಲ್ಲ.....
ಕಾಲಕ್ಕೆ ತಕ್ಕಂತೆ ಸ್ನೇಹಿತರು ಬದಲಾಗುತ್ತರೆ ಹೊರೆತು ಸ್ನೇಹ ಅಲ್ಲ....
ಹಾಗೆ ನಾವುಗಳು ಹೊಸ ಹೊಸ ಸ್ನೇಹಿತರನ್ನು ಮಾಡಿಕೊಳ್ಳುತೆವೆ..ವಿವಿಧ ಮನೊಭಾವದ ವ್ಯಕ್ತಿಗಳು...ಹೊಸಬಗೆಯ..ಮತು, ಅಭಿರುಚಿ ಹೀಗೆ ಎಲ್ಲವನ್ನು ತಿಲಿಯುತ್ತ..ನಮ್ಮ ಬಗ್ಗೆ ಅವರಿಗೆ ತಿಳಿಸುತ್ತ..ಸ್ನೇಹದ ಪಯಣವ ಮುಂದುವರೆಸುತ್ತೆವೆ....ಹೀಗೆ ಸಾಗುವ ಬಾಳಾ ದಾರಿಯಲಿ... ಕೆಲುವರು ಪ್ರಾಣ ಸ್ನೇಹಿತರಗಿ ನಮ್ಮಲ್ಲೆ ಉಳಿಯುತ್ತರೆ.....
ಸ್ನೇಹಿತರ ಜೊತೆ ಕಳೆದ ಕ್ಷಣಗಳೆ....ಮರೆಯದ ನೂರು ನೆನಪುಗಳು....
ಅವರ ಜೊತೆ ಇದ್ದ ಕ್ಷಣ... ಹಿತವೆನಿಸುತ್ತದೆ... ನಾವು ನಮ್ಮ ಸ್ನೇಹಿತರೊಡನೆ ಎಲ್ಲ ವಿಷಯಗಳ್ಳನ್ನ ಯಾವ ಅಂಜಿಕೆ ಇಲ್ಲದೆ ಹೇಳುತ್ತಿವಿ.. ಅವರು ನಮ್ಮ ಸರಿ ತಪ್ಪುಗಳ್ಳನ್ನು ತಿದ್ದಿ ಹೇಳುತ್ತರೆ...
ಬೇಸರದ ಮನಸಿಗೆ..ಸಾಂತ್ವನದ ಮತುಗಳಿಂದ ಮನಸಿನ..ಗೊಂದಲವನ್ನು ದೂರ ಮಾಡುತ್ತರೆ....
ನಿಮಗೆ ಗೂತ್ತಿರಬಹುದು...ನಮಗೆ ತಿಳಿದ ಯಾವುದೆ ವಿಷಯನ ಮೊದಲು ಬಂದು ಹೇಳುವುದೆ ಗೆಳೆಯರ ಬಳಿ..... ಯಾಕೆ ಅಂದ್ರೆ ಅವ್ರು ನಮ್ಮ ಒಳ್ಳೆ ಜೊತೆಗರ/ಗರ್ತಿ ಅಗಿಬಿಟ್ಟಿರುತ್ತರೆ.. ಅಷ್ಟೊಂದು ನಂಬಿಕೆ ಕೂಡ ನಾವು ಅವರಲ್ಲಿ ಇಟ್ಟಿರುತ್ತೆವೆ...
ಸಜ್ಜನರ ಸಂಗ ಹೆಜ್ಜೆನು ಸವಿದಂತೆ..ಎಂಬ ಮಾತು ನಿಜ....
ಅದ್ರೆ ... ಆಯ್ಕೆ ಮಾತ್ರ..ಸರಿಯಾಗಿರಬೇಕು...
ನಿಜವದ ಸ್ನೇಹಿತ....ಒಮ್ಮೊಮ್ಮೆ ಗುರುವಾಗಿ ತಿದ್ದಿ ಬುದ್ದಿಹೆಳುತ್ತನೆ, ತಂದೆಯಂತೆ..ದಂಡಿಸುತ್ತನೆ...ತಾಯಿಂತೆ..ಮಮತೆ ತೊರಿಸುತ್ತನ್ನೆ..ತಮ್ಮ,ತಂಗಿಯಂತೆ ತರಲೆ ಮಾಡುವವನಾಗಿರುತ್ತನೆ..
ಹೀಗೆ ಒಬ್ಬ ಸ್ನೇಹಿತ...ರಕ್ತ ಸಂಭಂದಿಯಾಗಿ ನಮ್ಮ ಜೊತೆ ಇರುತ್ತನೆ..  
ನಮ್ಮ ಜೊತೆ ಇರೊರ ಜೊತೆ ನಾವು ಬೆರೆತು..ಸ್ನೇಹ,ಸಂತೋಷ,ಸುಖ,ದುಃಖ ಹಂಚಿಕೊಳ್ಳುತ್ತ ಸಾಗೋಣ...
ನಿಶ್ಕಲ್ಮಷವಿಲ್ಲದ ಸ್ನೇಹವೆ ನಿನಗೆ ನೀನೆ ಸಾಟಿ.....

ಅಂದು ಅವರ ಜೊತೆಯಲ್ಲಿ ಹಾಗೆ ಇದ್ದೇವು. ಅದರೆ ಇಂದಿನ ಪರಿಸ್ಥಿತಿಯೇ ಬೇರೆ ಇಂದು ಮತ್ಯಾರೋ ನಮಗೆ ತೀರ ಹತ್ತಿರದವರಾಗಿರುತ್ತಾರೆ. ಇವರುಗಳು ಹೊಸ ಗೆಳೆಯರು ಮತ್ತು ಗೊತ್ತಿರುವವರು. ಹಾಗೆಯೇ ಇವರ ಜೊತೆಯಲ್ಲಿಯೇ ಹೆಚ್ಚಿನ ಸಮಯ ಕಳೆಯುವಂತಾಗಿರುತ್ತದೆ. ಹಾಗಂತಹ ಅವರನ್ನು ನಾವುಗಳು ಏನೂ ಹಳೆಯ ಸ್ನೇಹಿತರನ್ನು ಪೂರ್ಣವಾಗಿ ಮರೆತಿರುವುದಿಲ್ಲ. ಅದೇ ಸಮಯ, ಸ್ಥಳ, ಅವಕಾಶದ ಅಭಾವದಿಂದ ಸ್ವಲ್ಪಮಟ್ಟಿಗೆ ಸ್ನೇಹ ಹಳತಾಗಿರುತ್ತದೆ ಅಷ್ಟೇ.
ಬದುಕಿನ ಪುಟಗಳಲ್ಲಿ ಸ್ನೇಹ ಮರೆಯದ ನೆನಪಾಗಿರಲಿ... ಈ ಸ್ನೇಹಲೋಕ ವಿಚಿತ್ರ... ರೀ... ವಯಸ್ಸು, ಜಾತಿ, ಸಿರಿತನ, ಬಡತನ ಇವೆಲ್ಲವ ಮೀರಿ ಬೆಳೆಯುವ ಗೆಳೆತನಕ್ಕೆ...ಗೆಳೆತನವೆ...ಸರಿ ಸಾಟಿ... ಜೀವನದ ದಾರಿಯಲ್ಲಿ ಸಿಗುವ.. ಏಷ್ಟೊ ಸ್ನೇಹಿತರು ನಮ್ಮ ನೆಂಟರಿಗಿಂತ ಆಪ್ತರಾಗಿ ಬಿಡುತ್ತರೆ.ಸ್ನೇಹ ಜೀವಿಯಾದ ಮನುಷ್ಯನು.. ಕೊನೆಯುಸಿರಿರೊವರೆಗು... ಸ್ನೇಹಿತರ ಹುಡುಕಟದಲ್ಲೆ.. ಕಾಲ ಕಳೆಯುತ್ತನೆ..... ಒಂದು ಮಗು ತಾನು ಬೆಳೆದು ಹದಿಹರೆಯದ ಹಂತ ತಲುಪಿದಗಲೆ... ಸ್ನೇಹದ ಅವಶ್ಯಕತೆ ತಿಳಿಯುವುದು..ಸ್ನೇಹ ಏಂಬುದು ಬಾಲ್ಯದಲ್ಲೆ ಬದುಕು ಕಲಿಸುವ..ಪಾಠ...
ನನ್ನ ಬದುಕಿನಲ್ಲಿ.... ಸ್ನೇಹ ತುಂಬ ದೊಡ್ಡ ಮಹತ್ವ ಹೊಂದಿದೆ....
ನನ್ನ ಬಾಳ ದಾರಿಯಲ್ಲಿ...ನನ್ನ ಜೊತೆ ಬಂದ ಸ್ನೇಹಿತರಿಗೆ.... ನನ್ನ ತುಂಬು ಹೃದಯದ ಧನ್ಯವಾದಗಳು....

ಕಷ್ಟದಲ್ಲಿ...ಕೈ ಕೊಡದೆ... ಸಂತಸದಲ್ಲಿ... ಭಾಗಿಯಗಿ..... ಸುಖ ದುಃಖವ ಅರಿತು... ಬೆರೆವ....
ಓ ಮೈ ಫ಼್ರೆಂಡ್....ಕಣ್ಣ...ಕಂಬನಿಯ...ಓರೆಸುವ....ಸ್ನೇಹಿತ....
ನಮ್ಮ ಸ್ನೇಹವಿದು ಇರಲಿ ಶಾಶ್ವತ......

ಸ್ನೇಹ ರಕ್ತಸಂಬಂಧಗಳ ಆಚೆಗಿರುವ...ಸಂಬಂಧ.....
ಈ ಸ್ನೇಹ.........
                                


ಭಾವಜೀವಿ..
* ಅಮ್ಮು*

ಓ ನನ್ನ ಗೆಳೆಯ ನಿನ್ನ ನೆನಪೇ ಹಸಿರಾಗಿದೆ..


ಪ್ರೀತಿಯ ಸ್ನೇಹಿತರೆ,
ಸುಪ್ರಸಿದ್ದವಾದ " ಬಾ ನೋಡು ಗೆಳತಿ ನವಿಳುಗರಿಯು ಮರಿ ಹಾಕಿದೆ" ಈ ಗೀತೆಗೆ ನನ್ನದೇ ಅದ ಒಂದು ರೀತಿಯ ಸಾಹಿತ್ಯ ಬರೆದಿರುವೆ..
ಒಂದು ಸಣ್ಣ ಪ್ರಯತ್ನ ಮಾಡಿರುವೆ ತಪ್ಪಿದಲ್ಲಿ ಕ್ಷಮಿಸಿ..ಎಂದು ಕೇಳುವೆ 

ಓ ನನ್ನ ಗೆಳೆಯ ನಿನ್ನ ನೆನಪೇ ಹಸಿರಾಗಿದೆ..
ಕಣ್ಣು ಮುಚ್ಚುತ ಕುಂತರು..ನಿನ್ನ ಬಿಂಬವೇ ಅಲ್ಲಿಯೂ..
ನಾ ಕಾಯುತಿರುವೆನು ನಿನ್ನ ಆಗಮನದ ದಾರಿಯ...II ಓ ನನ್ನ ಗೆಳೆಯ II

ನಾನು ನೀನು ಕಂಡ ಕನಸು..ಮನಸಿನಲ್ಲೇ ಉಳಿದಿದೆ..
ಪ್ರೀತಿ ಕನಸ ಹಾಗೆ ಉಳಿಸಿ ಎಲ್ಲಿ ಅಡಗಿ ಹೋಗಿರುವೆ..
ಪ್ರತಿ ಬಾರಿಯೂ..ನನ್ನ ಮನವು ನಿನ್ನ ನಗುವ ಬೇಡಿದೆ...

ಬಾ ನನ್ನ ಗೆಳೆಯ ನಿನ್ನ ನೆನಪಲಿ..ನಾನಿರುವೇನು....

ನಾನು ನೀನು ಕುಳಿತ ಜಾಗ ನಮ್ಮ ಮಾತ ನೆನೆಸಿದೆ..
ಈಗ ಅಲ್ಲಿ ನಮ್ಮ ನೆನಪೇ.ಚಿರವಾಗಿದೆ..
ನೀನು ಇರದ ನನ್ನ ಬಾಳು..ಬರುಡಾಗಿದೆ..

ಈ ನನ್ನ ಬಾಳಿಗೆ ನಿನ್ನ ಹೆಸರೇ ಉಸಿರಗಿದೆ...

ಬಾ ನನ್ನ ಗೆಳೆಯ...ನಿನಗಾಗಿ ನಾ ಕಾದಿರುವೆ...

ಭಾವಜೀವಿ 
* ಅಮ್ಮು*


ಹೋಗದಿರು ಮನವೇ..


ಯಾಕೋ ಇಂದು ಮನವು..
ನೆನೆಯುತಿರುವುದು ನಿನ್ನ..
ತಿಳಿಯಲಾರೆ..ನಾ ಕಾರಣವನ್ನ..
ಮುದುಡಿದ ತಾವರೆ..ಸೂರ್ಯನ ಕಿರಣವ..
ಕಂಡೊಡನೆ ಹೇಗೆ ಅರಳುವುದೋ..
ಹಾಗೆ ನನ್ನೀ ಮನದ ಕಣ್ಣು ಕೂಡ 
ನಿನ್ನ ಕಂಡೊಡನೆ..ಅರಳುವುದು..
ಬೆಂಡಾದ ಮನಕೆ ಜೀವ ಬಂದ ಹಾಗೇ..
ನಿನ್ನ ಮಾತುಗಳು ನನ್ನ ಮನಕೆ..
ದಿನ ಮಾತನಾಡೆ ಇರುವುದಿಲ್ಲ ನಾನು..
ಏನು ಮಾಡಿದೆ ನನಗೆ ಅಂತ ಮೋಡಿಯ ನೀನು...??
ಚಂದಿರನ ನೋಡಿದರೆ ಕಾಣುತಿರುವೇನು ಅವನಲ್ಲಿ ನಿನ್ನ..
ಮನವು ನವಿಲ ಹಾಗೇ ಕುಣಿಯುವುದು ನೋಡಿದ ಕೂಡಲೇ ನಿನ್ನ..
ಏಕೆಂದು ತಿಳಿಯುತ್ತಿಲ್ಲ.. ಈ ರೀತಿಯ..ಬದಲಾವಣೆಯನ್ನ..
ತಿಳಿದೋ ತಿಳಿಯದೆಯೋ..ನಾ..ಸೋತೆ..ನಿನಗೆ..
ಆದರು ಹೇಳುತಿರುವೆ ಮನಕೆ..
ನೀ..ಹೋಗಬೇಡ ಅವನೆಡೆಗೆ.

ಭಾವಜೀವಿ 
* ಅಮ್ಮು *


ಮರೆತು ಕೂಡ ಮರೆಯಲಾರೆ ನಾ ನಿನ್ನ..


ಸುಖವಿದೆ ಗೆಳೆಯ..ನಿನ್ನ ನೆನಪಲ್ಲೂ..
ಹರುಷದಿಂದಿರುವೆ..ಗೆಳೆಯ..ನಿನ್ನ..ಕಾಯುವಿಕೆಯಲ್ಲೂ..
ಸಿಗಲಾರದ ಚಂದಿರನಂತೆ ನೀನು..
ಚಂದಿರನ ಅಗಮನಕಾಗಿ..ಕಾಯುತಿರುವ..
ಮುಗಿಲ ಮಲ್ಲಿಗೆ ನಾನು..

ತಂಗಾಳಿಯ ತಂಪು..ನಿನ್ನ ಸಾಮಿಪ್ಯದಲ್ಲಿ..
ಕೋಗಿಲೆಯ ಇಂಪು..ನಿನ್ನ ಮಾತಿನಲ್ಲಿ..
ಮೂಡಿತೊಂದು ಹೊಸ..ಭಾವ ನನ್ನ ಮನದಲ್ಲಿ..

ಅರೆಯದೆ ಕಳೆದೆ ನಾ ಕೆಲವು ಕ್ಷಣಗಳ..
ನಿನ್ನ ಜೊತೆಯಲ್ಲಿ..
ನೆನಪ ನೆನೆಸಿಕೊಂಡು..ಖುಷಿ ಪಡುತಿರುವೆ..
ನನ್ನೀ ಮನದಲ್ಲಿ..

ಸೋಲಿಸಲು ಬಂದೆ ನಾನು ನಿನ್ನ ಬಾಳಲ್ಲಿ..
ನನಗರಿಯದೆ..ನಾನೆ ಸೋತೆ ನನ್ನ ಹೃದಯದಲ್ಲಿ..

ಸಿಗದ ಮನದ ಚಂದ್ರಮನೆ...
ನಿನ್ನ ಮರೆಯಲು...ನಾ ಪ್ರಯತ್ನಿಸಿ ಸೋತೆ..
ಮರೆತು ಕೂಡ ಮರೆಯಲಾಗದ..
ನೆನಪಾಗಿ ನೀ ಮನದಲ್ಲಿ ಕುತೆ..

ಭಾವಜೀವಿ 
* ಅಮ್ಮು *


ಕಾದಿರುವೆ ನಿನಗಾಗಿ..


ಗೆಳೆಯ ಕಾದಿರುವೆ ನಿನಗಾಗಿ..
ಪ್ರತಿ ಕ್ಷಣ ನಿನ್ನ ಆಗಮನಕ್ಕಾಗಿ...
ಕನಸ ಕಂಗಳು..ತವಕಿಸುತಿರುವುದು..
ನಿನ್ನ ನೋಡುವ ಸಲುವಾಗಿ..
ಕಣ್ಣ ಮುಂದೆ ಇರುವುದು ನಿನ್ನ ರೂಪ..
ಕಣ್ಣ ಮುಚ್ಚಿದೊಡನೆ..ಕಾಣುವುದು...
ಕಾಲಾನ ನಿಜ ರೂಪ..

ಸಾಯಲು..ಮನಸಿಲ್ಲ..
ಬದುಕಲು..ಜೊತೆಗೆ ನಿನ್ನಿಲ್ಲ..
ಓ ಜೀವವೇ..ಕಾಲ ಜಾರುವ ಮುನ್ನ..
ಕಣ್ಣು ಮುಚ್ಚದೇ ಕಾದಿರುವೆ.. ನಿನಗಾಗಿ..
ಒಂದು ಕ್ಷಣ ಬಂದು ಹೋಗಬಾರದೆ..
ನಮ್ಮ ಪ್ರೀತಿಯ ಸಲುವಾಗಿ..


ಭಾವಜೀವಿ 
* ಅಮ್ಮು*


ನಾ ಮರೆಯದ ನೆನಪು.ನೀನು...


ಕಂಗಳು ನೀನು.. ದೃಷ್ಟಿಯು..ನಾನು..
ನಿನ್ನ ಕಾಣದೆ..ಈಗ ಅಂಧಳು ನಾನು..
ಪ್ರತಿ ಕ್ಷಣ ಮನದಲ್ಲಿ..ನೋವುಗಳ ಮೆರವಣಿಗೆ..
ಕಾದು.. ಕುಳಿತಿರುವೆ ನೀ..ಬರುವ ದಾರಿಗೆ..
ಮರೆತು ಹೋದೆ ನಿನ್ನ ನೆನಪಲ್ಲೇ..ನನ್ನೇ ನಾ..
ಆದರೆ..ನಾ ಮರೆಯದ ನೆನಪು.ನೀನು.

ಭಾವಜೀವಿ 
* ಅಮ್ಮು *


ನೀನಿಲ್ಲದೆ...


ಒಂದನೋದು ಕಾಲದಲ್ಲಿ..ಗೆಳೆಯ..
ನೀನು ಇಲ್ಲದೆ ನಾನು ಇರುತಿರಲಿಲ್ಲ.
ಸವಿ ಮಾತು ಕೇಳದೆ ದಿನ ಕಳೆಯುತಿರಲಿಲ್ಲ..
ನನ್ನ ಪುಟ್ಟ ಪ್ರಪಂಚವೇ ನೀನಾದೆ..
ಕಾಲ ಜಾರಿತು...ನೀನು..
ನನ್ನ ತೊರೆದು ಹೋಗಲು..ಸಮಯ 
ಕೂಡಿ ಬಂದಿತ್ತು...

ಕಾಲವ ತಡೆಯಲು.ಯಾರಿಂದಲೂ ಸಾದ್ಯವಿಲ್ಲ..
ನಿನ್ನ ತಡೆಯಲು ನನಗಾಗಲಿಲ್ಲ...
ನೀ ಬಿಟ್ಟುಹೋದ ಬಾಳು ಬರುಡೆನಿಸಿತು..
ಬದುಕು.. ವ್ಯರ್ಥವೆನಿಸಿತು..
ದಿನಗಳು ಹುರುಳಿ ಹೋದವು..
ಚೈತ್ರ ಹೊಸದಾಗಿ ಚಿಗುರೋಡೆಯಾತೊಡಗಿತು..
ಸತ್ತು ಮಲಗಿದ್ದ ಹೃದಯದಲಿ..

ಈಗಲು..ನೀನಿಲ್ಲದೆ "ಏಕಾಂಗಿ " ನಾನು..
ಆದರು ಬದುಕುತಿರುವೆ ಸಾಗಿಸುತಿರುವೆ
ನವ ಚೈತನ್ಯದಿಂದ..
ನನ್ನವರಿಗಾಗಿ..ಅವರ ಪ್ರೀತಿಗಾಗಿ..
Be alone to happy...
Be happy to be alone..

ಭಾವಜೀವಿ 
* ಅಮ್ಮು *


ನೀನಿರಲು ಜೊತೆಯಲ್ಲಿ..


ನೀನಿರಲು ಜೊತೆಯಲ್ಲಿ..
ಬೇರೆ ಏನು ಬೇಕಿಲ್ಲ ..ನನಗೆ..
ನೀ ಬರುತಿರೆ ನನ್ನೆಡೆಗೆ..
ನಸು ನಾಚುವೆ ನಾ..ಮೆಲ್ಲಗೆ..

ನನ್ನೆ..ನಾ..ಮರೆಯುತಿರುವೆ.
ನೋಡುತ ನಿನ್ನನೆ..
ಮನವು..ಹೇಳದೆ ಕೇಳದೆ..
ನಡೆದಿದೆ..ನಿನ್ನ ದಾರಿಗೆ..

ಹೃದಯವು ತಿಳಿಯದೆ 
ಕೂಗಿದೆ..ನಿನ್ನ ಹೆಸರನ್ನು..
ಮುಡಿಪಿಡುವೆ..ಉಸಿರನ್ನೇ..ನಿನಗಿನ್ನು

ನೀ ನಗಲು..ನನ್ನ ಮನದೊಳಗೆ.
ನಿನ್ನ ನಗುವಿನ ..ಸಹಿ ಇದೆ..ನನ್ನ ಪ್ರೀತಿಗೆ..
ನಿನ್ನದೇ ನೆನಪಿದೆ....ನನ್ನ ಮನದೊಳಗೆ..
ಕಾದಿರುವೆ ನೀ ಬರುವ..ದಾರಿಗೆ  

ನೀ  ಇರಲು ನನ್ನ ಜೊತೆಯಲ್ಲಿ..
ಅಸೆ ಹೊತ್ತಿರುವೆ ನನ್ನ ಕಣ್ಣುಗಳಲ್ಲಿ..
ಖುಷಿ ಆಗಿರುವೆ ನೀ ಮನದಲ್ಲಿ..
ಕೊನೆಗೂ ಕಳೆದು ಹೋದೆ ನಾ.ನಿನ್ನಲ್ಲಿ..
ಬೆರೆತೆ ನೀನು ನನ್ನುಸಿರಲಿ..


ಭಾವಜೀವಿ 
* ಅಮ್ಮು*

ನಾವೇಕೆ..ಹೀಗೆ...


ನಾವು..ನೀರು..ಹೂವು.ನಕ್ಷತ್ರ.ಚಂದಮಾಮ..
ತಂಗಾಳಿ..ಮಳೆ..ಎಲ್ಲವನ್ನು..ಇಷ್ಟ ಪಡುತೀವಿ..
ಮಳೆಯಲಿ..ನೆಂದು.ಮಕ್ಕಳಂತೆ..ಕುಣಿತೀವಿ..
ಮಕ್ಕಳ ಜೊತೆ ಮಗುವಾಗಿ..ಬಿಡುತೀವಿ..
ಹೀಗೆ ಇರುವ ನಾವು..ಅರಿಯದೆ.. ಇರುವ ಕಂಪನಕ್ಕೆ.ಸೆಳೆತಕ್ಕೆ..
ಸೋಲುತೀವಿ..ಆ ಸೆಳೆತ ಪ್ರೀತಿ ಅಂತ ಗೊತ್ತಾದಾಗ.ಒಳಗೊಳಗೇ.ನಾಚುತೀವಿ..
ಕಣ್ಣಲ್ಲಿ ಕನಸಿಗೂ ಜಾಗ ಕೊಡದೆ..ಮನಗೆದ್ದವರ..ನೆನೆಸಿಕೊಳ್ಳುತೀವಿ...
ಜೊತೆಗಾರನ..ಬೆಚ್ಚನೆಯ..ತೋಳಲ್ಲಿ ಬಂಧಿಯಾಗಲು..ಸಿದ್ದರಾಗಿ ಬಿಡುತೀವಿ..
ಚಿಕ್ಕ ಮಕ್ಕಳಂತೆ ಹಠ ಮಾಡುತ.ಏನನ್ನೋ ಸಾಧಿಸಿದವರಂತೆ..ಖುಷಿ ಪಡುತೀವಿ..
ಮಳೆಯಲಿ..ಗೆಳೆಯನ ಜೊತೆಯಲಿ..ಹೋಗುವುದಕೆ..ಬಯಸುತೀವಿ..
ಪೂರ್ಣ ಬೆಳದಿಂಗಳಿನಲ್ಲಿ..ಚಂದ್ರನ ನೋಡುತ್ತಾ..ಏನನ್ನೋ..ನೆನೆಯುತ್ತ..ಮೌನಕ್ಕೆ..ಶರಣಾಗುತೀವಿ..
ಬೇರೊಬ್ಬರ.. ನಗುವಿನಲಿ..ಕಣ್ಣಿನಲಿ..ನಮ್ಮನ್ನ ನಾವು ಕಾಣ  ಬಯಸುತೀವಿ..
ಕಂಡ..ಆಸೆಗಳೆಲ್ಲ..ಕನಸೆಂದು..ಮರೆತು... ಬೇರೆಒಬ್ಬರ..ಕನಸ ಈಡೇರಿಸಲು..
ಸಿದ್ದರಗುತೀವಿ... ಸ್ನೇಹ..ಪ್ರೀತಿಗಾಗಿ ಹತುರಿತೀವಿ..
ಬೆಟ್ಟದಷ್ಟು..ನೋವಿದ್ದರೂ..ಮನದಲ್ಲಿ..ಬಚ್ಚಿಟ್ಟು..ಕಣ್ಣಲಿ ಅವಿತಿಟ್ಟು..ಏನು ಆಗಿಲ್ಲವೆಂದು..ಸದಾ ನಗುತ..ನಗಿಸುತ..ಹೃದಯದ.ನೋವ.ಮರೆಯುತ್ತೇವೆ.. ನಾವೇಕೆ ಹೀಗೆ..??? ಹೌದು... ನಾವು ಹುಡುಗಿಯರೇ ಹೀಗೆ..
ಬೆಳಕ ಹಿಡಿದು..ಮನೆ ಮನ ಬೆಳಗಿಸಲು..ಬದುಕನ್ನೇ..ಮಿಸಲಿಡುತೀವಿ..
ನಾವು ಹುಡುಗಿಯರೇ ಹೀಗೆ...

ಭಾವಜೀವಿ
* ಅಮ್ಮು*


ಮಳೆ... ನೆನಪೆಂಬ ತುಂತುರು ಹನಿಗಳ...ಮಾಲೆ...


ಮಳೆಗೂ..ನನಗು ಏನ್ ಸಂಬಂಧ ಇದ್ಯೋ..ನಂಗಂತೂ ಗೊತ್ತಿಲ್ಲ..ಆದ್ರೆ ಮಳೇನ ನಾನು ಸಕತ್ ಇಷ್ಟ ಪಡ್ತೀನಿ..
ಮಳೆ ಹನಿ ಬಿಳುವಾಗ..ಆಕಾಶಕೆ ಮುಖಮಾಡಿ..ಸಂತೋಷ ಪಡ್ತೀನಿ.. ಯಾಕೆ ಅಂದ್ರೆ ಬೀಳೋ ಮೊದಲ ಹನಿ ನನ್ನ ಮೇಲೆ ಬೀಳಬೇಕು ಅನ್ನೋ ಅಸೆ ಇಂದ.. ಮೋಡ ಕವಿದ ವಾತವರಣ..ನೋಡ್ತಿದ್ರೆ ಏನೋ ಖುಷಿ..ವರುಣ ಧರಿತ್ರಿಯನ್ನ ತಂಪಾಗಿಡಲು... ಅಲ್ಲದೆ ಅವಳ ಮೇಲೆ ಪ್ರೀತಿ ಇಂದನೋ..ಅವಳ ನೋಡಲು ಆನಂದದಿಂದ ಬರುವ..
ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹಾಡುತಿದೆ ಅಂತ ಹೇಳಿರೋ ಕವಿ ಮಾತು ಸತ್ಯ... ತಣ್ಣನೆ ಬಿಸೋ ತಂಗಾಳಿ..ಮಳೆಯನ್ನೂ ಹೊತ್ತು ತರುತದೆ....
ನಾ..ಚಿಕ್ಕವಳಿದ್ದಾಗ... ಬೇಕು ಅಂತಾನೆ ಮಳೆಲಿ ನೆನೆದು ಕೊಂಡು ಮನೆಗೆ ಬರುತ್ತಿದ್ದೆ ... ಕಾಲಿಗೆ ಹಾಕಿದ್ದ ಶೂ ಎಲ್ಲ ಪೂರ್ತಿ..ನೀರು ತುಂಬಿದಾಗಂತೂ... ಅದ್ರಲ್ಲಿ  ನಡೆಯೋದೇ ..ಒಂಥೆರ..ಖುಷಿ..
ನೆನ್ಕೊಂಡು ಮನೆಗೆ ಹೋದಮೇಲೆ ಅಜ್ಜಿ ಬೈಯೋಕೆ ಶುರು ಮಾಡೋದು..ಆಮೇಲೆ..ಟವೆಲ್ ತಂದು..ತಲೆ ಒರಸಿ..ಚೆಂದ ಮಾಡಿ..ನೋಡ್ಕೊತಿದ್ರು... ರೈನ್ ಕೋಟ್ ಇದ್ರೂ ಹಾಕಿ ಕೊಳ್ಳದೆ.. ಮಳೆಲಿ.. ಬಿಸಿ ಬಿಸಿ ಜೋಳ ತಿನ್ನುತ್ತ..ಯಾರು ಇಲ್ಲದ ರೋಡ್ ಅಲ್ಲಿ ಹಾಡುತ... ಹೋಗ್ತಿದ್ದ..ದಿನಗಳು..ಮತ್ತೆ ಬರಲಾರವು... ಹೂ ಗಿಡಗಳ..ಮಧ್ಯ..ನವಿರಾಗಿ.. ಕುಳಿತು ಕೊಂಡು ತುಂತುರು ಹನಿಗಳ..ಸ್ಪರ್ಶಕೆ ನವಿಲಂತೆ ಕುಣಿತಿದುದ್ದು.. ಮಳೆ ನಿಂತರು ಹನಿ ನಿಲ್ಲೋಲ ಅನ್ನೋಹಾಗೆ...ಗೇಟ್ ಮೇಲೆ ಬಿದ್ದ..ಹನಿಗಳು..ಮುತ್ತಿನಂತೆ ಕಂಗೊಲಿಸುವಾಗ.. ಅದ್ನ ನಿಧಾನ ಮಾಡಿ ನಾನು ಕುಡಿದಿದ್ದು... ಅಜ್ಜಿಗೆ ಹೇಳದೆ ಮಹಡಿಮೇಲೆ ಹೋಗಿ..ತುಂತುರಿನಲ್ಲಿ ಆಟ ಆಡುತ..ದಿನಗಳ ಸವೆಸಿದ್ದು..ಮತ್ತೆ ಹಿಂದಿರುಗಿ ಹೋಗಲಾರದ ದಿನ ಅವು... ಮನೆ ಪಟ ಮುಗಿಸಿಕೊಂಡು..ನಾನು ನನ್ನ ಸ್ನೇಹಿತೆಯರ.ಜೊತೆಯಲ್ಲಿ ಬರುವಾಗ..ತಕ್ಷಣ ಬಂದ ಮಳೆಗೆ ಮೈಯೊಡ್ಡಿ..ರಸ್ತೆ ಯಲ್ಲಿ ಕುಣಿದಾಡಿದ್ದು..ಅವರೆಲ್ಲ ನೋಡಿ loose gal ಅಂತ ಬೈದಿದ್ದು..
ತಣ್ಣನೆ ಸಂಜೆಯಲಿ..ಬೀಳುವ ಮಳೆ ಜೊತೆಯಲಿ.. ಸ್ನೇಹಿತರ ಜೊತೆ..ice cream ತಿಂದಿದ್ದು.. ತಿನ್ನುತ್ತ ಮಾತನಾಡುತ..ಹೋಗುವಾಗ..ಎಲ್ಲೋ ಒಂದು ಕಡೆ ಪ್ರೇಮಿಗಳು..ಕೈ ಕೈ ಹಿಡಿದು ಸಾಗುವ..ದೃಶ್ಯ.ಕಂಡು...ನಾನು ನನ್ನ ಕೈ ನೋಡಿಕೊಂಡಿದ್ದು..ನನಗು ಇಂತ ಗೆಳೆಯ ಜೊತೆ ಇರಬರದ ಅಂತ ಬಯಸಿದ್ದು.. ನಸು ನಾಚುತ ಮುಂದೆ ಹೆಜ್ಜೆ ಹಾಕಿದ್ದು.. ಮರೆಯುವಂತ ದಿನಗಳ..ಅಲ್ಲ ಮರೆಯಲಾರದಂತ ದಿನ..ಅವು... ಒಬ್ಬಳೇ.. ವಿಧಿಯ ದೊಷಿಸುತ..ಮೇಲುಸೇತುವೆ ಮೇಲೆ ಮಳೆ ಜೊತೆಯಲಿ..ಕಣ್ಣಿರು ಇಟ್ಟ..ದಿನಗಳು..ನನ್ನ ಅ ದಿನಗಳು...ನಾನು ಮಳೆಯಲಿ ನೆನೆಯುವಾಗ.. ನನ್ನ ತುಸು ದೂರದಿಂದ ನೋಡುತ..ನಗುತಿದ್ದ ಆ.ಪೆದ್ದು ಹುಡುಗನ ಮುದ್ದು ನೋಟವ..ಮರೆಯಲಾರೆ...
ಇವೆಲ್ಲ  ನೆನಪಾಗಿದ್ದು... ನಾ..ಏಕಾಂಗಿಯಾಗಿ.. ಮಳೆಯಲಿ ಕೊಡೆ ಇಡಿದು.. ಹೊರಗೆ ಕೈಯಲ್ಲಿ ಹನಿಯನ್ನು ಸ್ಪರ್ಶಿಸುತ..ನಡೆವಾಗ..ಮೊದಲು ನಡೆದಾಡಿದ..ಜಾಗಗಳ..ನೋಡಿದಾಗ..
ಕಣ್ಣು..ತುಂಬಿ ಬಂದಾಗ..ಹಿಂತಿರುಗಿ ಹೋಗಲಾರದ ದಿನಗಳ ನೆನೆದಾಗ.. ಓ..ನೆನಪೇ ನೀ ಎಷ್ಟು ಹಿತ..ನೊಂದು..ಬೆಂದ ಮನಸಿಗೆ..
ನೆನಪಿನ ಜೊತೆಯಲಿ..ನೆನಪಲ್ಲೇ ಉಸಿರಾಡಿ..ನೆನಪಿನ ಬಾಳ ಪಯಣವ ಸಾಗಿಸುತಿರುವ..ನಾವಿಕಳು..ನಾನು...
ಮಳೆ ಒಂದು ಸುಂದರ ನೆನಪೇ ಸರಿ..ಅಳಿಸಲಾಗದಂತ..ಮಸಿಹೊಗದ..ಮಧುರ ನೆನಪೇ ನೀ..
ನಗುವಿನಲ್ಲೂ..ಅಳಿಸುವ.. ಅಳುವಿನಲ್ಲೂ .ನಗಿಸುವ.. ಮನದ ಮೂಲೆಯಲ್ಲಿ ಇದ್ದ..ಘಟನೆಯನ್ನ ಹೆಕ್ಕಿ ತರುವ ನೆನಪೇ ನೀ..ಸುಂದರ..
ಏಕಾಂತದಲ್ಲೂ..ಸಾವು ಇರದ  ಸಂಗಾತಿ..ನೀ..


ಭಾವಜೀವಿ 
* ಅಮ್ಮು*

ನವಿಲುಗರಿ..ನೆನಪೆಂಬ ಹೆಜ್ಜೆಯ..ಗುರುತು.


ಬಾಲ್ಯದ ಆಟ ಆ ಹುಡುಗಾಟ ಇನ್ನು ಮಾಸಿಲ್ಲ..
ನಿಜ ಸ್ನೇಹಿತರೆ.. ನಾನು ನೀವು..ಎಂದು ಎಂದೆಂದು.. ಮರೆಯಲಾಗದ..ಒಂದು ಸುಂದರ..ಪಯಣ "ಬಾಲ್ಯ".
ನಂಗೆ ನವಿಲಗರಿ ಅಂದ್ರೆ ಸಕತ್ ಇಷ್ಟ.. ಚಿಕ್ಕ ವಯಸಲ್ಲಿ.. ಯಾರ ಬಳಿ ಇದ್ರೂ ನಾನು ಅದ್ನ.. ಕದ್ದು ಅದ್ರು ಸರಿ..ನಂ ಹತ್ರ ಇಟ್ಕೊತಿದ್ದೆ..
ಒಂದು ಸುಂದರ ರವಿವಾರದ ಸಂಜೆ..ನನ್ನ ಕಪಾಟಿನಲ್ಲಿ ಇದ್ದ ಹಲವು ಪುಸ್ತಕಗಳ್ಳನ್ನ.. ತೆಗದು..ನೋಡ್ತಿದ್ದೆ..ಅದೇ ಯಾಕೋ.. ಮನಸು ನೋಡು ಅಂತ ಹೇಳ್ತಿತ್ತು ..
ಮನೆಲು ಯಾರು ಇರಲಿಲ್ಲ.. ಸುಮಧುರ...ಹಾಡು ಕೇಳ್ತಾ..ಕೆಲಸ ಪ್ರಾರಂಭ ಮಾಡಿದೆ.. ನನ್ನ ನೆಚ್ಚಿನ ಹಾಡುಗಳಲ್ಲಿ ಒಂದಾದ.."ಮೈ ಆಟೋಗ್ರಪ್ಹ್" ಚಿತ್ರದ ಗೀತೆಯು ಒಂದು ಅದರಲ್ಲಿ ಸವಿ ಸವಿ ನೆನಪು ಸಾವಿರ ನೆನಪು ಸಾವಿರ ಕಾಲಕು ಸವೆಯದ ನೆನಪು..ಈ ಗೀತೆ ಬಹಳ ನೆಚ್ಚಿನದು.. ಕೇಳುತ... ನನ್ನ ಡೈರಿಯನ್ನು ತೆಗೆದೇ...ಸುಂದರ ನೆನಪಿನ ಗುಚ್ಚವೆ ಅದರಲ್ಲಿ ಇತ್ತು.. ಹಾಗೆ ಕೆಳ..ಸಾಲಿನಲ್ಲಿ ನೋಡಿದರೆ..ನನ್ನ ಬಳಿ ಇದ್ದ ಪ್ರೈಮರಿಯಾ..poems book.. ಇನ್ನು ಹಾಗೆ ಇದೆ... ಮತ್ತೆ ಹಳೆಯ ಬ್ಯಾಗಿನಲ್ಲಿ..ಇಟ್ಟಿದ್ದ..ಪೆನ್.. ಚಾಕಲೇಟ್..ಪೇಪರ್.. ನೆನಪಿನ ಗುರುತಾದ.. ಆಲದಮರದ ಎಲೆಗಳು..ಕೊಲಿಮರಿಯ..ರಂಗುರಂಗಿನ ಪುಕ್ಕಗಳು..ಎಲ್ಲ ಎಲ್ಲ..ಬಾಲ್ಯವ ನೆನಪಿಸುತದೆ...
ನನಗೊಂತರ ಹುಚ್ಚು ಹವ್ಯಾಸ.. ಏನಪ ಅಂದ್ರೆ.ಯಾರ್ ನಂಗೆ ಏನೇ ಕೊಡಲಿ..ಅದ್ನ ಭದ್ರವಾಗಿ..ಇಟ್ಕೋಳೋದು..ಯಾಕಂದ್ರೆ ಅವೆಲ್ಲ...ಒಂದೊಂದು  ನೆನಪಿನ ಕತೆ ಹೇಳುವ...ವಸ್ತುಗಳು.. ನನ್ನ ಬಳಿ ಇದ್ದವು..ಗೆಳೆಯ ಗೆಳತಿಯರು ಕೊಟ್ಟ ಗ್ರೀಟಿಂಗ್ಸ್..ಆಲದಮರದ ಎಲೆ..ಕೊಲಿಮರಿಯ ಪುಕ್ಕ..ಎಲ್ಲ ಎಲ್ಲವು ನನ್ನ ಬಳಿ ಇದ್ದಾವೆ..
ಬಾಲ್ಯವೇ ಹಾಗೆ... ತಪ್ಪು ಸರಿ ಗೊತ್ತಿಲ್ಲದ..ದಿನಗಳು..ಬರಿ ಮೋಜು ಮಸ್ತಿಗೆ..ಹತೊರಿಯುತಿದ್ದ ಕ್ಷಣಗಳು.ಅವು... 
ತುಂಬ ಸಡಗರದಿಂದ ಕಳಿತಿದ್ದ ದಿನ ಅವು...ಮತ್ತೆಂದು ಬರಲಾಗದ.. ಬಯಸಿದರು ಸಿಗಲಾರದ ಮಧುರ ದಿನಗಳು ಅವು...
ನನ್ನ ಒಂದು ಪುಸ್ತಕದಲ್ಲಿ..ನನಗೆ ನನ್ನ ಗೆಳೆಯ ಗೆಳತಿಯರು ಕೊಟ್ಟ ಗ್ರೀಟಿಂಗ್ಸ್ ನೋಡಿ ತುಂಬ ಖುಷಿ ಆಯಿತು... ಅದ್ರ ಜೊತೆ ನನ್ನ ಇನ್ನು ಹುಚ್ಚು ಪ್ರೀತಿ ಇಂದ... ಏನೋ ಮುಗ್ದ ನಂಬಿಕೆ ಇಂದ ಇಟ್ಟಿರುವ... ನವಿಲುಗರಿ.. ನೋಡಿ..ನನ್ನ ಗೆಳತಿ "ಸವಿ" ನೆನಪು ಆದಳು..ಯಾಕೆ ಅಂದ್ರೆ ಅದನ್ನ ಅವಳು ನಂಗೆ ನಮ್ಮ ಸ್ನೇಹದ ಗುರುತಾಗಿ ಕೊಟ್ಟಿದ್ಲು..ನಂಗೆ ನವಿಲು ಗರಿ ಅಂದ್ರೆ ಸಕತ್ ಇಷ್ಟ ಅಂತ ಮನೇಲಿ ಎಲ್ಲರನು ಕರೆದು ಕೊಂಡು ಕುಮಾರಸ್ವಾಮಿ ಜಾತ್ರೆಲಿ..ಹಠ ಮಾಡಿ ನವಿಲುಗರಿಯನ್ನ..ಮನೆಯವರಲ್ಲಿ ಕೇಳಿ ತೆಗೆಸಿಕೊಂಡು ನಂಗೆ  ಕೊಟ್ಳು..ನಿಷ್ಕಲ್ಮಶವಾದ...ಸುಂದರ ಮನಸು ನನ್ನ "ಸವಿ"ದು..ನನ್ನ ಪ್ರೀತಿ ಇಂದ..."ಚಿನ್ನಿ" ಅಂತಿದ್ಲು..ನಾನು ಹಾಗೆ ಪ್ರೀತಿ ಇಂದ ಕಡ್ಡಿ ಅಂತಿದ್ದೆ.... ಲೇ  ಕಡ್ಡಿ ನಿನ್ ಕೊಟ್ಟ ನವಿಲಗರಿ...ಸಾವಿರ ನೆನಪನ್ನ ಮನಸಲ್ಲಿ ಹೊತ್ತು ತರುತಿದೆ ಕಣೆ.. ಈಗಲೂ  ಜೋಪಾನ..ಮಾಡಿ..ಇಟ್ಟಿದಿನಿ ಮುಂದೆನು..ಇಟ್ಟಿರ್ತೀನಿ ಕಣೆ..ಮನಸಿನ ಪುಟಗಳ ನಡುವೆ ನೆನಪೆಂಬ ನೀ..ಕೊಟ್ಟ ನವಿಲುಗರಿ..ನಮ್ಮ ಸ್ನೇಹದ ಗುರುತು ಕಣೆ... ನೆನಪು ಇದ್ದೀಯ ನಿಂಗೆ ಹೇಳಿದ್ದೆ..ಇದು ಮರಿ ಹಾಕಿದಮೇಲೆ ನಿಂಗೆ ಒಂದು ಕೊಡ್ತೀನಿ ಅಂತ... ಮರಿ ಹಾಕುತ್ತೇನೋ ಅನ್ನೋ ಹುಚ್ಚು ಅಸೆ ಇಂದ..ಮತ್ತೆ ಮತ್ತೆ ನನ್ನ ಡೈರಿಯನ್ನ ತೆಗದು ನೋಡಿ ಮಾಡ್ತಿದೀನಿ...ಎಷ್ಟು ಹುಚ್ಚಿ ಅಲ್ವ ನಾನು..ಅದು ಹಾಕೋಲ..ಮತ್ತೆ ನೀನು ಸಿಗೋಲ.. ಬರಿ ನೆನಪು ಅಷ್ಟೇ...
ಸ್ನೇಹದಲ್ಲಿ ಎಲ್ಲವು ಚೆಂದ ಕಣೆ... ಬಾರೆ ಮತ್ತೆ ಅದೇ ಚಿಕ್ಕವಯಸಿನ ಮಕ್ಕಳಾಗಿ.. ಎರಡನೇ ಬೆಂಚಿನ..ಮೂಲೆಯಲ್ಲಿ.ಕಿಟಕಿಯ ಪಕ್ಕ..ಕುಳಿತು..ಹುಣಸೆ ಹಣ್ಣನ್ನ..ಮೆಲ್ಲಗೆ ತಿನ್ನೋಣ..
ಸವಿ ನೆನಪುಗಳು ಬೇಕು ಸವಿಯಲಿ ಬದುಕು.. ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ..ಪಯಣಿಗಳು..ನಾನೆ..ನಾವಿಕಳು..ನಾನೆ..

ಭಾವಜೀವಿ 
*ಅಮ್ಮು*


ಹೃದಯದ ಚಿಪ್ಪಿನೊಳಗೆ ನಿನ್ನ ನೆನಪು ಸ್ವಾತಿ ಮುತ್ತಾಗಿವೆ


ಮೌನವಾಗಿದ್ದು ಸಾಕೆಂದು...ಭುವಿಯ ನೋಡಲು..

ಬರುವುದು ಮಳೆ..
ಇಳೇಯ ತಣಿಸಲು ಬಾ..ಎಂದು ಮನದಲ್ಲೇ..

ಮೌನವಾಗಿ ಕರೆದಳು ಇಳೆ.
ಕೊನೆಗೂ..ಒಂದಾಯ್ತು.ಇಳೆ..ಮತ್ತು ಮಳೆ..
ಕಾಡುತಿದ್ದ ಮೌನಕೆ ವಿದಾಯ.ಹೇಳಿತು..
ಪ್ರಕೃತಿಯ ಪ್ರೀತಿಕಂಡು..ಮನಸ್ಸು..ಭಾರವಾಯಿತು..
ಚಿಟ ಪಟ ಚಿಟ ಪಟ..ಮಳೆಯ ಸದ್ದಿಗೆ..
.ಮನದಲಿದ್ದ ನಿನ್ನ ನೆನಪು ನವಿಲಿನಂತೆ
ಗರಿಯ ಬಿಚ್ಚಿ ಕುಣಿದು ಬಿಡಲು ತವಕಿಸಿತ್ತು..
ಅಷ್ಟರಲ್ಲಿ ಇಳೆಯನಗಲಿ ಮಳೆಯು ದೂರ ಸಾಗುತಿತ್ತು..
ಭುವಿಯ ತೊರೆದ ಮಳೆಯ ಕಂಡು ಏಕೋ ಕಾಣೆ
ಹೃದಯವನ್ನು ನಿನ್ನ ನೆನಪೇ ಕಾಡುತಿತ್ತು...
ಮನದ ಪುಟಗಳಮೇಲೆ..ಕಣ್ಣಿರೆಲ್ಲ..ಮೋಡವಾಗಿ..
ನಿನ್ನ ನೆನಪು..ಕಣ್ಣ ಹನಿಗಳಾಗಿ..ಬಿದ್ದು..
ಹೃದಯದ ಚಿಪ್ಪಿನೊಳಗೆ...ಸ್ವಾತಿ ಮುತ್ತಾಗಿವೆ....

ಭಾವಜೀವಿ
* ಅಮ್ಮು*