Thursday, 22 November 2012

ನಿನ್ನ ಎದೆಯ ಗೆಜ್ಜೆ ಸದ್ದು ನಾನ್ ಅಲ್ಲ ಅಲ್ವ....."ನಾನೆ ನಿನ್ನ ನಾನೆ ನಿನ್ನ ತುಂಬಾ ತುಂಬಾ ಪ್ರೀತಿ ಮಾಡೋದು......."
ಹುಡುಗಿಯೊಬ್ಬಳ ಮೊಬೈಲ್ ನಲ್ಲಿ.... ಬರುತಿದ್ದ ಹಾಡು ಕೇಳುತ.. ತನ್ನೆಲ್ಲ ನೆನಪನ್ನು ನೆನೆಯುತ ಅವಳು 
ಏಕಾಂತದ ಮೌನದಲ್ಲಿ......ಮುಗಿಲಲ್ಲಿರುವ ಚಂದ್ರಮತ್ತು ನಕ್ಷತ್ರ‍ನೋಡುತ್ತ...ಕಣ್ತುಂಬಿಕೊಳ್ಳುತ್ತಳೆ..ಕೇಳದೆ ಮೆಲ್ಲಗೆ ಕಣ್ಣೀಂದ ಜಾರುವ ಹನಿಯ ತಡೆಯದೆ... ಮನದ ನೊವನೆಲ್ಲ..
ತನ್ನ ನಗುವಿನಲ್ಲಿ..ಮರೆಮಾಚುತ್ತ... ಅವನ ಅಗಮನದ ದಾರಿಯ ನೋಡುತ್ತ ನಿಂತಿರುತ್ತಳೆ ಹತಷೆಯ ಮುಗುಳ್ನಗು ಬೀರುತ್ತ.... ಸರಿ ಸುಮಾರು ಏಳು ವರ್ಷಗಳ ಬಳಿಕ.

ಅದು ಏನನ್ನೊ ಹುಡುಕುತಿದ್ದ ಕಂಗಳಿಗೆಥಟ್ಟನೆ..ನೆನಪಗಿದ್ದು... ಕಣ್ಣೆದುರಿಗೆ ಇದ್ದವನು... ಕಣ್ಣೆದುರೆ ದೂರಾಗಿ ಹೋದ ಪರಿಯನ್ನು ನೆನೆಸಿಕೊಳ್ಳುತ್ತಅವನು ಮತ್ತೆ ಸಿಗುವನನನ್ನಷ್ಟು ಅವನನ್ನು ಯಾರು ಪ್ರೀತಿಸಲಾರರು?ಅವ್ನು ನನ್ನ ಮತ್ತು ನನ್ನ ಪ್ರೀತಿನಾ ಮರೆತೆಬಿಡುವನ?ಎಂಬ ನೊರೆಂಟು ಹುಚ್ಚು ಪ್ರೇಶ್ನೆಗಳಿಗೆ ಉತ್ತರ ಮಾತ್ರ ಗುಪ್ತಗಾಮಿನಿಯಾಗಿದೆ.
ಮನದಲೆಲ್ಲೊ ನನ್ನ ಪ್ರೆಶ್ನೆಗಳಿಗೆ ಉತ್ತರ ಸಿಗದೆ ಹಾಗೆ ಪ್ರೆಶ್ನೆಗಳಾಗೆ ಇರಲಿ ಎನ್ನುವ.. ಅಸೆಯು ಅವಳದ್ದು.

ನಿನ್ನ ಪ್ರೀತಿಯ ನೆನಪು ಮತ್ತೆ ನೀನು ನನ್ನ ಬಳಿ ಬರುವೆಯೆಂಬ ಕನಸುಗಳ ನಡುವೆ...
ನನ್ನ ಪಯಣ....
ನೆನಪಿದ್ಯೊ ಇಲ್ಲ ಮರೆತಿದ್ಯೊಮರೆತಿದ್ರೆ ಒಳ್ಳೆದು ಯಾಕೆ ಅಂದ್ರೆ ನನ್ನ ನೆನಪು ನಿನಗೆ ಬೇಡ.. ಅದ್ರೆ ನಿನ್ನ ನೆನಪು ನನ್ನ ಪ್ರೀತಿಗೆ ಉಸಿರು... ನನ್ನ ಪ್ರೀತಿನ ಸಾಯ್ಸೊಕೆ ನಂಗೆ ಇಷ್ಟ ಇಲ್ಲ ಕಣೋ
ಏಳು ವರ್ಷದ ಹಿಂದೆ ನಿನ್ನ ನನ್ನ ಪ್ರೀತಿ ಜೀವಂತವಾಗಿತ್ತು,
ಹಳೆ ದೇವಸ್ಥಾನದ ಬಳಿ.... ನೀನು ನನಗೆ ಪ್ರೀತಿ ಹೇಳಿದ್ದನ್ನುನಾನು ನೀನು ಬೆಳದಿಂಗಳ ರಾತ್ರಿಯಲ್ಲಿ ನಮ್ಮ ಮುಂದಿನ ಜೀವನದ ಕನಸ ಕಂಡಿದ್ದು......
ಹೊಸದಾಗಿ ನೀ ನನಗೆ ಪರಿ ಎಂದು ಹೆಸರಿಟ್ಟಿದ್ದು,ನಿನ್ನ ಪರಿಯನ್ನು ಚಂದಿರನಿಗೆ ಹೋಲಿಸಿದ್ದು....... ನೀನ್ನ ಆ ನಗುಗೆ ನನ್ನ ಮನಸೊತ್ತಿದ್ದು.... ಎಲ್ಲ ನಂಗೆ ಮತ್ತೆ ಬೇಕು ಅನ್ನಿಸುತ್ತಿದೆ... ಮತ್ತೆ ಕೊಡ್ತಿಯಾ...
ಇಲ್ಲ ನಿನ್ ಕೊಡೊಲ್ಲ ಅಲ್ವ....
ಪರಿ ನೀನೆ ನಂಗೆ ಎಲ್ಲ ಕಣೆ.. ನಿನ್ನ ಪ್ರೀತಿ ನಿನ್ನ ಕೋಪನಿನ್ನ ನಗು ನಿನ್ನ ಅಳು... ಎಲ್ಲ ನಂಗೆ ಬೇಕು ಅಂತ ಅಂದು ಹೇಳಿ ಹಣೆಗೆ ಮುತ್ತಿಟ್ಟ ಹುಡುಗ ನೀನು.....
ಪ್ರೀತಿನೆ ಗೊತ್ತಿಲ್ಲದ ನಂಗೆಪ್ರೀತಿಸೋದು ಒಂದು ಕಲೆ ಅಂತ ಹೇಳಿ... ಯಾರು ಪ್ರೀತಿಸಲಾರದಷ್ಟು...ನನ್ನ ಪ್ರೀತಿಸಿದೋನು ನೀನು....
ಪರಿಆ ನಕ್ಷತ್ರನ ಎಷ್ಟು ಎಣಿಸೋಕೆ ಅಗೊಲ್ವೊ ಅಷ್ಟು ನಾನು ನಿನ್ನ ಪ್ರೀತಿ ಮಾಡ್ತಿನಿ ಕಣೆ..ಅಂದೆ.. ಏಷ್ಟೊ ಬೆಳದಿಂಗಳು... ಹೊಯ್ತು... ಅದ್ರೆ ಅಷ್ಟು ಬೆಳದಿಂಗಳಲ್ಲಿ... ನಿನ್ನ ನೆನಪೆ ನಕ್ಷತ್ರದ ಹಾಗೆ ಪ್ರಜ್ವಲಿಸುತಿತ್ತು....

ಕತ್ತಲೆ ಕವಿದಷ್ಟು ನಕ್ಷತ್ರ ಹೋಳೆಯುತ್ತಂತೆ....
ಹಾಗೆ ನಿನ್ನ ನೆನಪು ನನ್ನ ಮನದಲ್ಲಿ ಅದಷ್ಟು...ಪ್ರೀತಿ ಜಾಸ್ತಿ ಅಗುತ್ತೊ ಹೋರತು ಕಡಿಮೆ ಅಗೋಲ್ವೊ..ಮುದ್ದು..
ಮುದ್ದು ಅಂತ ಯಾರದ್ರು ಈ ತರ ಅಂದ್ರೆ ಒಂದು ಕ್ಷಣ ನಾನು ನಗ್ತಿನಿ ಗೊತ್ತ... ಯಾಕೆ ಅಂದ್ರೆ ನಾನು ನಿನ್ನ ಪ್ರೀತಿಯಿಂದ ಕರಿತಿದ್ದೆ... ಮತ್ತೆ ಕರೀತಿನಿ ಒಂದ ಸಲ ಬಾರೋ...
ಮನಸು ನಿನ್ನ ಕೂಗಿ ಕೂಗಿ ಕರಿತಿದೆ... ಅದ್ರೆ ಆ ಕರೆನ ಕೇಳೋ ನಿನ್ನ ಕಿವಿ ನನ್ನ ಪ್ರೀತಿ ವಿಷಯದಲ್ಲಿ ಕಿವುಡಾಗಿದೆ ಅಲ್ವ..
ನಿನ್ ಹೃದಯದ ಬಡಿತವನ್ನ.... ನಾ ಹಾಕೋ ಗೆಜ್ಜೆಗೆ ಹೋಲಿಸಿ... ಅದರಿಂದ ಬರೋ ಸದ್ದಿಗೆ ನನ್ನ ಹೋಲಿಸಿದ್ದೆ..
ಪರಿನನ್ನ ಎದೆಯ ಗೆಜ್ಜೆಸದ್ದು ನೀನೆ ಕಣೆಅಂತ... ನಾನು ಗೆಜ್ಜೆ ನೋಡಿದಾಗಲೆಲ್ಲ ನೀನ್ ಮಾತೆ ನೆನಪಾಗುತ್ತೆ ಕಣೋ....
ನನ್ನ ಇಷ್ಟೊಂದು ಪ್ರೀತಿಸಿದ್ದ ನಿನು... ಈಗ ಏನಾಯಿತು ನಿನ್ ಪ್ರೀತಿಗೆ ಹೇಳು... ಮುದ್ದು...

ಯಾವ್ ಕೆಟ್ಟ ಕಣ್ಣು ಬಿತ್ತು ನನ್ನ ನಿನ್ನ ಪ್ರೀತಿಮೇಲೆ... ಹೇಳು.....

ನಾವಿಬ್ರು ಕೈ ಹಿಡಿದು ನಾಡೆದಾಡಿದ್ದ ಆ ದಾರಿಯಲ್ಲಿ...ಈಗ ನೀರವ ಮೌನ ತುಂಬಿ ಕೊಂಡಿದೆ... ಮತ್ತೆ ಕೈ ಹಿಡಿದು ನಡೆಯೊಣ ಅಂದ್ರೆ.... ನಿನು ಬೇರೋಬ್ಬರ ಕೈ ಹಿಡಿತಿದ್ಯ..ಅಲ್ವ.

ಚೆನ್ನಗಿರು.... ನಂಗೆ ಅಷ್ಟೆ ಬೇಕಾಗಿದ್ದು.... ಮುದ್ದು...
ಕಾರಣವಿಲ್ಲದೆ ದೂರಾದೆ ನೀನು..... ನಿನ್ನ ಹೃದಯದಲ್ಲಿ ನನಗೆ ಜಾಗ ಇಲ್ಲ ಅಂತ ಗೊತ್ತೈತು...

ಹುಡುಗಿ ತನ್ನ ಪ್ರೀತಿಯನೆಲ್ಲ ತನ್ನ ಮನಸಿನಲ್ಲೆ ನೆನೆಸಿಕೊಳ್ಳುತ್ತನಿಂತಿರುವಾಗ....
ಅವಳ ಮೊಬೈಲ್ ಗೆ ಒಂದು ಕರೆ ಬರುತ್ತದೆ...
ಅವಳು ಪ್ರೀತಿಸಿದ ಹುಡುಗನ ಕರೆ ಅದಾಗಿರುತ್ತದೆ.
ಸ್ವೀಕರಿಸಿ ಮಾತನಾಡದೆ... ನಿಲ್ಲುತ್ತಳೆ..
"ಭೂಮಿಸಾರಿ ಕಣೇ.... ಏಳು ವರ್ಷ ಅದ್ಮೇಲೆ ಮತ್ತೆ ನಿನ್ನ ಪ್ರೀತಿನ ಕೊಡೋಕೆ ಬಂದೆಅದೆ ಪ್ರೀತಿ ಇಂದ.... ಅದ್ರೆ ಅದ್ನ ಸ್ವೀಕರಿಸೋ ಯೋಗ್ಯತೆ ಅಗಲಿನಂಗೆ ಇಲ್ಲ...
ನಿನ್ನ ಪ್ರೀತಿನಾ  ಅನುಮಾನಿಸ್ದೆ... ಕ್ಷಣಕ್ಕೆ.. ನಿನ್ನ ಮೇಲೆ ಕೋಪವಿತ್ತು..ಅದ್ರೆ ಆ ಕೊಪದ ಇಂದ ನೀನು ನನಗೆ ಬೇಕು ಅನ್ನೋದು ನನ್ನಲ್ಲಿ ಇತ್ತು....
ಅದ್ರೆ,, ಆ ವಿಧಿ ಮುಂದೆ ನಾವ್ಯಾರು ಅಲ್ವ.... ನಾನ್ ನಿನ್ನ ತುಂಬಾ ಪ್ರೀತಿ ಮಾಡ್ತಿದ್ದೆ... ಅದೆ ಇರಬೇಕು ನನ್ನಿಂದ ನಿನ್ನ ದೂರ ಮಾಡಿದ್ದು...
ತುಂಬ ಬೇಜಾರ್ ಅಗ್ತಿದೆ ಕಣೆ...
ಅದ್ರೆ ಭೂಮಿ ಟೈಮ್ ನೋಡು ಹೇಗಿದೆ ಅಂತ.... ಇನ್ನೋಂದು ತಿಂಗಳಲ್ಲಿ ನನ್ನ ಮದ್ವೆ...
ನಿಂಗು ಗೊತ್ತು.... ಪ್ರೀತಿನ ಕಳ್ಕೊಂಡೆ ಅನ್ನೊ ಟೈಮ್ ಗೆ ನೀನು ಮತ್ತೆ ಬಂದೆ ಅದ್ರೆ...? ನಂಗೆ ಅಂತ ಇನ್ನೊಂದು ಪ್ರೀತಿ ಕಾಯ್ತೈದೆ...
ಈ ನನ್ನ ಸೋತ ಹೃದಯದಿಂದ ಹೇಳ್ತಿದಿನಿ ಕಣೆ.....
"... ಮಿಸ್ ಯು..... "

ಪ್ಲೀಸ್ ಅಳಬೇಡ ಕಣೆ... ಇನ್ನೊಂದು ಸತ್ಯ ಗೊತ್ತ.... ನಿನ್ನಷ್ಟು ನನ್ನ ಯಾರು ಪ್ರೀತ್ಸೊಲ್ಲ ಅನ್ನೊದು...
ಮಾತಡು ಭೂಮಿ...
"ಚಂದ್ರು... ಕೊನೆದಾಗಿ ಒಂದ್ ಕೇಳ?..
ಕೇಳೆ... ಎನದು?
(ಅಳುತ್ತ ಭೂಮಿ ಕೇಳುತ್ತಳೆ)
ನಿನ್ನ ಎದೆಯ ಗೆಜ್ಜೆ ಸದ್ದು ನಾನ್ ಅಲ್ಲ ಅಲ್ವ.....
(ಅವಳ ಪ್ರೆಶ್ನೆಗೆ.. ಉತ್ತರ ಕೊಡಲಾಗದ ಚಂದ್ರು...)
ಭೂಮಿ...... "... ಮಿಸ್ ಯು..... " ಅನ್ನುತ್ತನೆ..
ಚಂದ್ರು ಸತ್ಯ ಗೊತ್ತ....
ಅಕಾಷದಲ್ಲಿ ಇರೋ ಚಂದಿರನ್ನ.... ನೋಡಿ ಸಂತಸ ಪಡಬೇಕೆ ಹೊರೆತು....ಮುಟ್ಟೊಕೆ ಅಸೆ ಪಡಬಾರದು...
ಯಾಕೆಂದರೆ... ಅವ್ನು ಯಾರ್ ಕೈಗು ಸಿಗೋಲ...ಅಲ್ವ...
ಅಂತ ಅಳುತ್ತ.. ಫೋನ್ ನನ್ನು...ಕಟ್ ಮಾಡುತ್ತಳೆ....

ಭೂಮಿ ಮತ್ತು ಚಂದಿರನ ಪ್ರೀತಿ...ಹೇಳಲಾಗದು....
ಅದ್ರೆ ಅವರಿಬ್ಬರು ಮಾತ್ರ... ಒಂದಗಲಾರರು..
ದೂರದಿಂದಲೆ..ಚಂದಿರನ ನೋಡಿ ಖುಷಿ ಪಡುವ..ಭೂಮಿಯ ಪ್ರೀತಿ.. ವರ್ಣತೀತ..

ಭಾವಜೀವಿ
ಅಮ್ಮು


4 comments:

 1. ಕತ್ತಲೆ ಕವಿದಷ್ಟು ನಕ್ಷತ್ರ ಹೊಳೆಯುತ್ತಂತೆ....ಇದು ನಿಮ್ಮ ಇಡಿ ಲೇಖನಕ್ಕೆ ಕಿರೀಟ ಪ್ರಾಯವಾದ ಸಾಲುಗಳು..ಮನೆದೇವ್ರ ಚಿತ್ರದ ಹಾಡಿಂದ ಶುರುವಾದ ಪ್ರೀತಿ..ವಾಸ್ತವಕ್ಕೆ ಬಂದು ನಿಲ್ಲುವುದು..ಲೇಖನದ ಶೈಲಿ ಸುಂದರವಾಗಿದೆ....ಅಣೆಕಟ್ಟಿನಲ್ಲಿ ನೀರು ತುಂಬಿದ್ದರು ಅದು ಹೊರಗೆ ಹೋಗುವುದು ಕೆಲವೇ ಬಾಗಿಲುಗಳ ಮೂಲಕ..ಈ ಬ್ಲಾಗ್ ಗಳು ಹಾಗೆಯೇ..ನಿಯಂತ್ರಿಸಿ ಭಾವನೆಗಳನ್ನು ಬಿಟ್ಟಾಗ ಈ ತರಹ ಸುಮದುರ ಲೇಖನಗಳು ಹೊರ ಹೊಮ್ಮುತ್ತವೆ.

  ReplyDelete
 2. ತುಂಬಾ ಧನ್ಯಾವಾದಗಳು..... ನನ್ನ ಪ್ರಥಮ ಬರಹವನ್ನ..ಪ್ರೋತ್ಸಾಹಿಸಿದ್ದಕೆ...

  ReplyDelete
 3. ಚನ್ನಾಗಿದೆ. ಅಮ್ಮು....ಆದರೆ ಸ್ಪೆಲ್ಲಿಂಗ್ ಮಿಸ್ಥೇಕ್ ಸರಿ ಮಾಡ್ಕೋಬೇಕು.....

  ReplyDelete
 4. ಅಣ್ಣ ತುಂಬಾ ಧನ್ಯವಾದಗಳು...
  ನಾನು ಈಗ ಕಲಿತಿರೋದು...
  ಸರಿ ಮಾಡಿಕೋಳ್ಳುತ್ತಿನಿ..

  ReplyDelete