Friday, 7 February 2025

ಅವನೆಂದರೆ....

 


ನಂಗೆ ಎಂದು ಸಿಗ್ದೆಇರೋನು,

ಸಿಕ್ಕಿದ್ರು ಜೊತೆಗಿರಾದವನು,

ನನ್ನ ಕಲ್ಪನೆಗೂ ಮೀರಿದವನು,

ಪ್ರೀತಿಲಿ ಪರಿಶುದ್ಧದವನು,

ಸೆಳೆತಕ್ಕೆ ಸಿಗದವನು,

ಅವನು ನನಗಾಗಿ ತುಸುಕಾಲ ಮಿಡಿದವನು,

ನಿಷ್ಕಲ್ಮಶ ನಗುವಿನವನು,

ಪ್ರೀತಿಗೆ ಕರುಗುವನು,

ಸಂಧರ್ಭಕ್ಕೆ ಸಿಕ್ಕಿ ದೂರದವನು,

ಅವನು... ನನ್ನ ಪ್ರೀತಿಯೋ,

ಹೃದಯದ ಸ್ಪಂದನೆಯೋ. ಗೊತ್ತಿಲ್ಲ..

ಆದ್ರೆ. ಅವನು ನನ್ನವನು..ನಾ ಎಂದಿಗೂ ಬಯಸುವನು..

ನಾ ಪ್ರೀತಿಸಿದವನು, ನನ್ನ ಮುದ್ದು ಜೀವ ಅವನು ,

ಬಯಸಿದಷ್ಟು ನನ್ನ ದೂರಮಾಡಿದವನು ,

ನನ್ನ ಮನಸಲ್ಲಿ ಬೆಚ್ಚಗೆ ಇರುವವನು ..

ನಗುವ ಚೆಲುವನೂ.
 
-ರಂಜಿತಾ 



No comments:

Post a Comment